ತಿರುವನಂತಪುರ: ರಾಜ್ಯದಲ್ಲಿ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೊಲ್ಲಂ ಮತ್ತು ಮಂಚೇರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ನರ್ಸಿಂಗ್ ಕಾಲೇಜು ಆರಂಭಿಸಲು ಆಡಳಿತಾತ್ಮಕ ಅನುಮತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 2022-23 ನೇ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು 14 ಬೋಧಕ ಹುದ್ದೆಗಳು ಮತ್ತು 22 ಬೋಧಕೇತರ ಹುದ್ದೆಗಳನ್ನು ರಚಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.
ಸಭೆಯ ಇತರ ನಿರ್ಣಯಗಳು:
ಪಾಂಗ್ಪಾರಾದಲ್ಲಿ ಸಿ.ಎಚ್. ಮಹಮ್ಮದ್‍ಕೋಯ ಸ್ಮಾರಕ ರಾಜ್ಯ ಮಾನಸಿಕ ವಿಕಲಚೇತನರ ಸಂಸ್ಥೆಯ ಖಾಯಂ ನೌಕರರಿಗೆ 11ನೇ ವೇತನ ಪರಿಷ್ಕರಣೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ.
ಕೇರಳ ಕಲಾಮಂಡಲಂ ಕಲಾ ಸಾಂಸ್ಕøತಿಕ ಕಲ್ಪಿತ ವಿಶ್ವವಿದ್ಯಾಲಯದಲ್ಲಿ ಸರ್ಕಾರಿ ಮಾನ್ಯತೆ ಪಡೆದ ಹುದ್ದೆಗಳ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ.
ಐಎಂಜಿಯ ಶೈಕ್ಷಣಿಕೇತರ ಸಿಬ್ಬಂದಿಯ 11ನೇ ವೇತನ ಪರಿಷ್ಕರಣೆಗೆ ಅನುಮೋದನೆ.
ರಾಜ್ಯದ ಅನುದಾನಿತ ಶಾಲೆಗಳಲ್ಲಿ 2011-12 ರಿಂದ 2014-15 ರ ಅವಧಿಯಲ್ಲಿ ಹೆಚ್ಚುವರಿ ಹುದ್ದೆಗಳಲ್ಲಿ ನೇಮಕಗೊಂಡ ಶಿಕ್ಷಕರು/ಶಿಕ್ಷಕೇತರರಿಗೆ ಷರತ್ತುಗಳಿಗೆ ಒಳಪಟ್ಟು ರಕ್ಷಣಾತ್ಮಕ ಪ್ರಯೋಜನಗಳನ್ನು ಒದಗಿಸಲಾಗುವುದು.
ಭಾರತೀಯ ಸೇನೆಯ ಭಾಗವಾಗಿರುವ ಜಿ ಆರ್ ಇ ಎಫ್‍ಗಳು ಮತ್ತು ಬಿ ಆರ್ ಒಗಳ ನಿವೃತ್ತರು/ಅವರ ಸಹವರ್ತಿಗಳು/ವಿಧವೆಯರ ವಸತಿಗಾಗಿ ಬಳಸಲಾಗುವ ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ.
ಬಿ.ಎಸ್.ಎಫ್, ಸಿ.ಆರ್.ಪಿ.ಎಫ್,ಎಸ್.ಎಸ್.ಬಿ, ಐಟಿಬಿಪಿ ಕಟ್ಟಡಗಳ ಕೇಂದ್ರ ಪೋಲೀಸ್ ಪಡೆಗಳ ನಿವೃತ್ತ ಸೈನಿಕರು/ಪತಿ/ಪತ್ನಿ/ವಿಧವೆಯರ ವಸತಿಗಾಗಿ ಸಹ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ರಾಜ್ಯದ 313 ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪ್ರಾಥಮಿಕ ನೀರು ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ, ಪಾಲಕ್ಕಾಡ್ ಅನಕ್ಕರ ಪಂಚಾಯತ್ ನ ಕೂಟಕಡವ್ ರೆಗ್ಯುಲೇಟರ್‍ನ ಉಳಿದ ಕಾಮಗಾರಿಗಳು, ವಾಣಿಯಂ ಕುಳಂ ಮಣ್ಣನೂರಿನಲ್ಲಿ ಭಾರತ ಹೊಳಗೆಗೆ ಅಡ್ಡಲಾಗಿ ಚೆಕ್‍ಡ್ಯಾಮ್‍ನ ತುರ್ತು ಪುನಶ್ಚೇತನಕ್ಕಾಗಿ ಯೋಜನೆಯ ಪ್ರಸ್ತಾವನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಯಿತು. ಮತ್ತು ಬಲದಂಡೆ ರಕ್ಷಣೆ ಕಾರ್ಯಗಳು ನಡೆಸಲು ತೀರ್ಮಾನಿಸಲಾಗಿದೆ.