ತಿರುವನಂತಪುರ: ರಾಜ್ಯ ಸರ್ಕಾರಕ್ಕೆ ತುರ್ತು ಆರ್ಥಿಕ ನೆರವು ಅಗತ್ಯವಿದ್ದು ಸಾಲ ಪಡೆಯಲು ಕೇಂದ್ರ ಸರ್ಕಾರ ವಿಧಿಸಿರುವ ನಿಬರ್ಂಧಗಳನ್ನು ಹಿಂಪಡೆಯಬೇಕು ಎಂದು ರಾಜ್ಯ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಒತ್ತಾಯಿಸಿದ್ದಾರೆ. ಕೇಂದ್ರದ ಕ್ರಮಗಳಿಂದ ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎಂದು ಸಚಿವರು ಹೇಳಿದರು. ಕೆ.ಎನ್.ಬಾಲಗೋಪಾಲ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆದಾಯದ ಕೊರತೆ, ಗ್ರ್ಯಾಂಡ್‍ನಲ್ಲಿನ ಕಡಿತ ಮತ್ತು ಜಿಎಸ್‍ಟಿ ಪರಿಹಾರದ ರದ್ದತಿಯು ಕೇರಳಕ್ಕೆ ಹೊಣೆಗಾರಿಕೆಯನ್ನು ಸೃಷ್ಟಿಸಿತು. ಇದು ಈ ವರ್ಷ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ. ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಕೇಂದ್ರಕ್ಕೆ ಕಳುಹಿಸಿರುವ ಪತ್ರದ ಪ್ರಕಾರ ವಿತ್ತ ಸಚಿವಾಲಯ ಏಕಪಕ್ಷೀಯವಾಗಿ ರಾಜ್ಯದ ಸಾಲದ ಮಿತಿಯನ್ನು ಕಡಿತಗೊಳಿಸಿದೆ ಎಂದಿದೆ.
ಕಿಫ್ಬಿ ಹಾಗೂ ಪಿಂಚಣಿ ಕಂಪನಿ ಪಡೆದಿರುವ ಸಾಲವನ್ನು ರಾಜ್ಯದ ಸಾಲಕ್ಕೆ ಸೇರಿಸಬಾರದು ಎಂದು ಕೆ.ಎನ್. ಬಾಲಗೋಪಾಲ್ ಆಗ್ರಹಿಸಿದರು. ರಾಜ್ಯ ಸರ್ಕಾರ ಖಾತ್ರಿಪಡಿಸುವ ಎಲ್ಲ ಸಾಲವೂ ಸರ್ಕಾರದ ಸಾಲ ಎಂಬ ನಿಲುವನ್ನು ಕೇಂದ್ರ ಸರ್ಕಾರ ತಳೆಯುವ ಸಾಧ್ಯತೆ ಹೆಚ್ಚಿದೆ. ಕಿಫ್ಬಿಯಿಂದ ಪಡೆದ ಸಾಲವನ್ನು ರಾಜ್ಯ ಸರ್ಕಾರದ ಸಾಲ ಎಂದು ಪರಿಗಣಿಸಲಾಗುವುದು. ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಕಿಫ್ಬಿಯನ್ನು ಉಸಿರುಗಟ್ಟಿಸಲು ಯತ್ನಿಸುತ್ತಿವೆ ಎಂದು ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಕೂಡ ಹರಿಹಾಯ್ದಿದ್ದರು.
ತೀವ್ರ ಆರ್ಥಿಕ ಸಂಕಷ್ಟದತ್ತ ರಾಜ್ಯ?: ಸರ್ಕಾರ ಸಾಲ ಮಾಡಬೇಕಿದ್ದು ನಿರ್ಬಂಧಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಹಣಕಾಸು ಸಚಿವರಿಂದ ಪತ್ರ
0
ಜುಲೈ 26, 2022
Tags