ಮುಳ್ಳೇರಿಯ: ಮುಳಿಯಾರ್ ಗ್ರಾಮ ಪಂಚಾಯತಿ ಹನ್ನೊಂದನೇ ವಾರ್ಡ್ ನ ಕಾಂಕ್ರಿಟೀಕರಣಗೊಂಡ ಮಂಚಕಲ್ ಮೋಟ ಕುಳತ್ತಿಂಗಲ್ ರಸ್ತೆಯನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು. ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 15 ಲಕ್ಷ ರೂಪಾಯಿ ವೆಚ್ಚ ಮಾಡಿ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಿ ನವೀಕರಿಸಲಾಗಿದೆ.
ಕಾರಡ್ಕ ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಕೆ ನಾರಾಯಣನ್, ವಾರ್ಡ್ ಸದಸ್ಯ ಸಿ. ನಾರಾಯಣಿಕುಟ್ಟಿ, ಜಂಟಿ ಬಿಡಿಒ ಶಾಜಿ, ಎಂ.ಜಿ.ಎನ್.ಆರ್.ಇ. ಜಿಎಸ್ ಬ್ಲಾಕ್ ಎಇ ಪ್ರದೀಪ್ ಕುಮಾರ್, ಮುಳಿಯಾರ್ ಪಂಚಾಯತ್ ಎಇ ಎಂ ಎನ್ ಶಿಜಿತ್, ಸಂದೀಪ್ ಮತ್ತು ಕಲಾಂ ಪಳ್ಳಿಕಲ್ ಮಾತನಾಡಿದರು. ವಾರ್ಡ್ ಸದಸ್ಯ ವಿ. ಸತ್ಯವತಿ ಸ್ವಾಗತಿಸಿ, ರಸ್ತೆ ಫಲಾನುಭವಿ ಕೆ ಸುರೇಂದ್ರನ್ ವಂದಿಸಿದರು.