ತಿರುವನಂತಪುರ: ನಾವು ಒಗ್ಗಟ್ಟಾಗಿ ಜೊತೆಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ. ಸುಖ-ಸಹಬಾಳ್ವೆಗಾಗಿ ಮನಸ್ಸುಗಳು ಒಂದಾಗಬೇಕು ಎಂದ ಅವರು, ಬಕ್ರೀದ್ ಆತ್ಮಾರ್ಪಣೆಯ ಸಂದೇಶವನ್ನು ನೀಡಿ ಹೇಳಿರುವರು.
ಈದ್ ಪ್ರಾರ್ಥನೆಯ ನಂತರ ಪುರಾತನ ಶೈಲಿಯಲ್ಲಿ ಜೀರ್ಣೋದ್ಧಾರಗೊಂಡ ಚೇರಮಾನ್ ಜುಮಾ ಮಸೀದಿಗೆ ಭೇಟಿ ನೀಡಿದರು. ರಾಜ್ಯಪಾಲರ ಭೇಟಿ ಅದ್ಭುತವಾಗಿದೆ ಎಂದು ಮಸೀದಿಯ ಖತೀಬ್ ಅಬ್ದುಲ್ ಕರೀಂ ನದ್ವಿ ಕೂಡ ಪ್ರತಿಕ್ರಿಯಿಸಿದ್ದಾರೆ.
ಬಲಿಪೆರುನ್ನಾಳ್ ಅಂಗವಾಗಿ ವಿವಿಧ ಈದ್ ಗಳಲ್ಲಿ ಇಂದು ಬೆಳಗ್ಗೆ ನಮಾಜ್ ನಡೆಯಿತು. ಮಳೆಯಿಂದಾಗಿ ಈ ಬಾರಿ ವಾಡಿಕೆಗಿಂತ ಈದ್ ಪ್ರಾರ್ಥನೆ ನಡೆಸಲು ಆಗಮಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಕೊರೋನಾ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಹಬ್ಬದ ಆಚರಣೆಗೆ ಯಾವುದೇ ನಿಬರ್ಂಧಗಳಿಲ್ಲದೆ ಇಂದು ನಡೆದಿದೆ.