ಕುಂಬಳೆ: ಸೀತಾಂಗೋಳಿಯ ಕಿನ್ಪ್ರಾ ಪಾರ್ಕಿನಲ್ಲಿರುವ ಮಾನಸ ಇಕೋ ಬ್ಯಾಗ್ಸ್ ನ ನೂತನ ಕಟ್ಟಡದ ಶಿಲನ್ಯಾಸವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಇತ್ತೀಚೆಗೆ ನೆರವೇರಿಸಿದರು. ಮಾನಸ ಸಂಸ್ಥೆಯಿಂದ ಪೋಲಿಮಾರ್ ಹಾಗೂ ಪೇಪರ್ ಉತ್ಪನ್ನಗಳ ನೂತನ ಘಟಕ ಇದಾಗಿದೆ. ಸಂಸ್ಥೆಯ ನಿರ್ದೇಶಕಿ ಶ್ರೀಲತಾ ಸತೀಶ್ ಹಾಗೂ ಸತೀಶ್ ರಾವ್ ಉಪಸ್ಥಿತರಿದ್ದರು. ಸೂರ್ಯ ಭಟ್ ಎಡನೀರು ಶುಭ ಹಾರೈಸಿದರು.