ಕಾಸರಗೋಡು: 'ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ'ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ'ಖಾರಿಫ್-2022' ಪ್ರಚಾರ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಭಿಯಾನಕ್ಕೆ ಚಾಲನೆ ನೀಡಿದರು.
ಹವಾಮಾಣ ವೈಪರೀತ್ಯದಿಂದ ಸಂರಕ್ಷಣೆ, ಬೆಳೆ ವಿಮೆಯ ಮೂಲಕ ಸಂರಕ್ಷಣೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಹಾನಿಯಾಗದಂತೆ ಬೆಳೆಗಳ ರಕ್ಷಣೆ ನೀಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಕೃಷಿ ಸಚಿವಾಲಯ ಮತ್ತು ಸಾರ್ವಜನಿಕ ವಲಯದ ಕೃಷಿ ವಿಮಾ ಕಂಪನಿಯಿಂದ ಅನುಷ್ಠಾನಗೊಂಡ ಯೋಜನೆ ಇದಾಗಿದೆ. ಹದಿನಾಲ್ಕು ದಿವಸಗಳ ಕಾಲ ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಸಂಚರಿಸಲಿದೆ. ಕೇರಳ ಬ್ಯಾಂಕ್ ಪ್ರಬಂಧಕ ಟಿ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಮಾ ಪ್ರತಿನಿಧಿ ಅಜಿತ್ ಉಪಸ್ಥಿತರಿದ್ದರು. ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಸ್ವಾಗತಿಸಿದರು. ಉಪನಿರ್ದೇಶಕಿ ಎನ್.ಮೀರಾ ವಂದಿಸಿದರು. ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಆದ್ಯತೆ ನೀಡಲಾಗಿದ್ದು, ಪ್ರವಾಹ, ಭೂಕುಸಿತ, ಬಲವಾದ ಗಾಳಿ(ಮೆಣಸು, ಕೋಕೋ, ಬಾಳೆ ಮತ್ತು ಅಡಕೆ ಕೃಷಿಗೆ ಮಾತ್ರ)ಯಿಂದ ಉಂಟಾಗುವ ಬೆಳೆ ನಷ್ಟಕ್ಕೆ ವಿಮಾ ರಕ್ಷಣೆ ಲಭ್ಯವಿದೆ. ಬೆಳೆಗಳ ಬೆಳವಣಿಗೆಯ ಹಂತವನ್ನು ಆಧರಿಸಿ ಜಂಟಿ ಸಮಿತಿಯ ಪರಿಶೀಲನಾ ವರದಿಯನ್ನು ಆಧರಿಸಿ ಪರಿಹಾರವನ್ನು ನಿರ್ಧರಿಸಲಾಗುತ್ತದೆ. ನಷ್ಟವಾದ 72 ಗಂಟೆಗಳ ಒಳಗೆ ಸಾಲ ಪಡೆಯುವ ಬ್ಯಾಂಕ್, ಕೃಷಿ ಭವನ ಅಥವಾ ಂIಅ ಅನ್ನು ನೇರವಾಗಿ ಸಂಪರ್ಕಿಸಿಲಿಖಿತವಾಗಿ ತಿಳಿಸಬೇಕಾಗಿದೆ.