ಕಾಸರಗೋಡು: ಜಿಲ್ಲೆಯಲ್ಲಿ ಜಲಸಂರಕ್ಷಣಾ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಲಶಕ್ತಿ ಅಭಿಯಾನದ ಕ್ಯಾಚ್ ದಿ ರೈನ್ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಆಯೋಜಿಸಿದ್ದ ಮೊಬೈಲ್ ಛಾಯಾಚಿತ್ರ, ಚಿತ್ರಕಲೆ ಮತ್ತು ಡಿಜಿಟಲ್ ಪೆÇೀಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಬಹುಮಾನ ವಿತರಿಸಿದರು.
ಪೋಸ್ಟರ್ ಬರೆಯುವ ಸ್ಪರ್ಧೆಯಲ್ಲಿ ಕೆ. ಶಿವನ್ಯಾ, ದಿವ್ಯಾ ಜ್ಯೋತಿ ರಾವ್, ಪಿ.ಎಂ.ಮುಹಮ್ಮದ್ ಫಾಝಿಲು, ಮುಹಮ್ಮದ್ ಯೂನಿಸ್, ಸುಹಾ ಜಾಕೀರ್ ಅಬ್ದುಲ್ಲಾ, ಎಂ. ಜ್ಯೋತಿ, ಕೆ. ಸ್ನೇಹಾ, ಸುಹಾಸ್ ಕೃಷ್ಣನ್, ಎಂ.ವಿ.ಶ್ರೀಶ, ಕೆ. ಸಲೀಜಾ ಹಾಗೂ ಜಿಲ್ಲಾಧಿಕಾರಿ ಪ್ರಮಾಣ ಪತ್ರ ವಿತರಿಸಿದರು.
ಡಿಜಿಟಲ್ ಛಾಯಾಗ್ರಹಣ ಸ್ಪರ್ಧೆ ಟಿ.ಸಿ.ರೋಹನ್, ಎಸ್. ಜಿಷ್ಣು, ಖಾದರ್ ಪಾಂಡ್ಯಾಳ, ಕೆ.ಬಿ.ರತೀಶ್ ಕುಮಾರ್, ಸುಮಿತ್ ಕುಟ್ಟಿಯಾನ್, ಟಿ.ಕೆ.ಮುನೀರ್, ಅಶ್ವತ್ ಪಾಲಕಿಲ್, ಎ.ವಿ.ರತೀಶ್, ಪಿ.ಎಂ.ಅನೂಪ್ ಮತ್ತು ಗೌತಮ್ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಕೆ. ಅನಿರುದ್ಧ, ಕೆ. ಅರುಣಿಮಾ ಚಂದ್ರನ್, ಇವಿ ಅಶೋಕನ್, ಅನ್ವಿತಾ ದೀಪ್, ಜಾನ್ವಿ ಎಸ್. ನಾಥ್, ಮೊಹಮ್ಮದ್ ಅನ್ಶಾದ್, ಪಿ.ಕೆ.ರಹಮತುಲ್ ಫೈಜಾ, ಪಿ. ವೇದಾ, ರೇμÁ್ಮ ಉನ್ನಿಕೃಷ್ಣನ್, ಎಸ್. ಅಶೋಕ ಅವರು ಜಿಲ್ಲಾಧಿಕಾರಿಗಳಿಂದ ಉಡುಗೊರೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಲಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಒ. ರತೀಶ್, ಬಡತನ ನಿರ್ಮೂಲನಾ ಯೋಜನಾ ನಿರ್ದೇಶಕ ಕೆ. ಪ್ರದೀಪನ್, ಎಂಜಿಎನ್‍ಆರ್‍ಇಜಿಒ ಜಿಲ್ಲಾ ಎಂಜಿನಿಯರ್ ಜ್ಯೋತ್ಸನಾ, ಎಲ್‍ಎಸ್‍ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ಅನುರಾಧ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾಚ್ ದಿ ರೈನ್: ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
0
ಜುಲೈ 30, 2022