ಪೆರ್ಲ: ಎಣ್ಮಕಜೆ ಗ್ರಾ.ಪಂ. ಕುಟುಂಬಶ್ರೀ ವತಿಯಿಂದ ಸ್ನೇಹಿತ ಜೆಂಡರ್ ಹೆಲ್ಪ್ ಡೆಸ್ಕ್ ಮಾಹಿತಿ ಕಾರ್ಯಗಾರ ಪಂಚಾಯತು ಸಭಾಂಗಣದಲ್ಲಿ ಜರಗಿತು. ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು.ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆವಹಿಸಿದ್ದರು.
ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪಂ.ಸದಸ್ಯಯರಾದ ಮಹೇಶ್ ಭಟ್,ಶಶಿಧರ,ಇಂದಿರಾ,ನರಸಿಂಹ ಪೂಜಾರಿ,ರಮ್ಲ, ಕುಸುಮಾವತಿ,ಉಷಾ ಕುಮಾರಿ,ಆಶಾಲತಾ ಮೊದಲಾದವರು ಶುಭಾಶಂಸನೆಗೈದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ಡಿಪಿಎಂ ಅರ್ಜುನ್ ಪ್ರಸಾದ್,ಸ್ಮಿತಾ,ಶೋಭನಾ,ನಮಿತಾ ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿದರು.ಕುಟುಂಬಶ್ರೀ, ಉಪಾಧ್ಯಕ್ಷೆ ಶಶಿಕಲಾ ಸ್ವಾಗತಿಸಿ,ಸದಸ್ಯೆ ಯಶ್ಮಿನ್ ವಂದಿಸಿದರು. ಸಿಡಿಎಸ್ ಸದಸ್ಯೆಯರು,ಆಶಾ ವರ್ಕರ್,ಎಡಿಎಸ್ ಪದಾಧಿಕಾರಿಗಳು ಭಾಗವಹಿಸಿದ್ದರು.