ಪಡುಕುತ್ಯಾರು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಚಾತುರ್ಮಾಸ್ಯ ವ್ರತಾ ಚರಣೆಯು ಜುಲೈ 13 ರಿಂದ ಪಡುಕುತ್ಯಾರಿನ ಮಹಾ ಸಂಸ್ಥಾನದಲ್ಲಿ ಆರಂಭಗೊಂಡಿದೆ. ಶ್ರೀಗಳವರ 18ನೇ ವರ್ಷದ ಚಾತುರ್ಮಾಸ್ಯ ವ್ರತವಾಗಿದ್ದು, ಅವರು ಸತತ 7ನೇ ವರ್ಷ ಪಡುಕುತ್ಯಾರಿನ ಮಹಾ ಸಂಸ್ಥಾನದಲ್ಲಿ ಶುಭಕೃತ್ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕೈಗೊಳ್ಳಲಿದ್ದು, ಸೆಪ್ಟಂಬರ್ 10ರಂದು ವ್ರತವನ್ನು ಸಮಾಪ್ತಿಗೊಳಿಸಲಿದ್ದಾರೆ. ಜುಲೈ 13ರಂದು ಮುಂಜಾನೆಯಿಂದ ವೈದಿಕ ಕಾರ್ಯಕ್ರಮಗಳು ಶ್ರೀ ವಿಶ್ವಕರ್ಮ ಯಜ್ಞ ಚಾತುರ್ಮಾಸ್ಯ ಪ್ರತ ಸಂಕಲ್ಪದ ವಿಧಿ ವಿಧಾನಗಳು ಬಳಿಕ ಶ್ರೀ ಗುರುಪಾದ ಪೂಜೆ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಮತ್ತು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವ ಅಧ್ಯಕ್ಷ ಪಿವಿ ಗಂಗಾಧರ ಆಚಾರ್ಯ ಉಡುಪಿ, ಶ್ರೀನಾಗ ಧಮೇರ್ಂದ್ರ ಸರಸ್ವತಿ ಸಂಸ್ಕøತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ ಸೂರ್ಯಕುಮಾರ ಆಚಾರ್ಯ ಹಳೆಯಂಗಡಿ, ಅಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮಣ್ಣು, ಶ್ರೀ ಸರಸ್ವತಿ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್ ಆಚಾರ್ಯ ಕುತ್ಯಾರು, ಕಾಞಂಗಾಡು, ಮಧೂರು, ಕುಂಬಳೆ ಆರಿಕ್ಕಾಡಿ, ಬಂಗ್ರ ಮಂಜೇಶ್ವರ, ಕೋಟೆ ಕಾರು, ಮಂಗಳೂರು, ಕಾರ್ಕಳ, ಮೂಡಬಿದ್ರೆ, ಕೊಲಕಾಡಿ, ಕಾಪು, ಕಟಪಾಡಿ, ಬಾರ್ಕೂರು, ಉಪ್ರಲ್ಲಿ, ಭಟ್ಕಳ, ಗೋಕರ್ಣ, ಬೆಂಗಳೂರು, ಹುಬ್ಬಳ್ಳಿ,ಪನ್ವೇಲ್ ಸೇರಿದ ಕರಾವಳಿಯ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನಗಳ ಧರ್ಮದರ್ಶಿಗಳು ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಉಪಾಧ್ಯಕ್ಷರುಗಳಾದ ಕೆ ಕೇಶವ ಆಚಾರ್ಯ ಮಂಗಳೂರು, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಪುತ್ತೂರು ಪೆÇೀಳ್ಯ ಉಮೇಶ ಆಚಾರ್ಯ ಬಂಗ್ರ ಮಂಜೇಶ್ವರ, ಭಾಸ್ಕರ ಬಿ ಆಚಾರ್ಯ ಭಟ್ಕಳ, ಪ್ರವೀಣ್ ಆಚಾರ್ಯ ರಂಗನಕೆರೆ, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಪಡುಬಿದ್ರಿ ನವೀನ್ ಆಚಾರ್ಯ ಕಟಪಾಡಿ, ಶೇಖರ ಆಚಾರ್ಯ ಕಾಪು, ಸುಧಾಕರ ಆಚಾರ್ಯ ಕೊಲಕಾಡಿ, ಪುರೋಹಿತ್ ಜಯಕರ ಆಚಾರ್ಯ ಮೂಡಬಿದ್ರೆ, ಸುಂದರ ಆಚಾರ್ಯ ಕೋಟೆಕಾರು, ಜನಾರ್ದನ ಆಚಾರ್ಯ ಆರಿಕ್ಕಾಡಿ ಕುಂಬಳೆ, ಕೋಟೆ ಕಾರು ಪ್ರಭಾಕರ ಆಚಾರ್ಯ ಮಧೂರು, ಪುರುಷೋತ್ತಮ ಆಚಾರ್ಯ ಮಾವಂಗಾಲ್, ಸಿಎ ಶ್ರೀಧರ ಆಚಾರ್ಯ ಪನ್ವೇಲ್, ಜ್ಯೋತಿಷಿ ಉಮೇಶ್ ಆಚಾರ್ಯ ಪಡೀಲು ಬೆಂಗಳೂರು, ಮನೋಹರ ಲಕ್ಕುಂಡಿ ಹುಬ್ಬಳ್ಳಿ, ಬಿ.ಜಗದೀಶ್ ಆಚಾರ್ಯ ಪಡುಪಣಂಬುರು , ವೈ ಧಮೇರ್ಂದ್ರ ಆಚಾರ್ಯ ಕಾಸರಗೋಡು, ತ್ರಾಸಿ ಸುಧಾಕರ ಆಚಾರ್ಯ, ಶಿಲ್ಪಿ ಸತೀಶ ಆಚಾರ್ಯ ಕಾರ್ಕಳ, ಜಯಕರ ಆಚಾರ್ಯ ಕರಂಬಳ್ಳಿ, ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ರೂಪೇಶ್ ಆಚಾರ್ಯ ಶಿರ್ವ ಇವರು ಉಪಸ್ಥಿತರಿದ್ದರು. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಚಾತುರ್ಮಾಸ್ಯದ ವೇಳೆಯಲ್ಲಿ ಪ್ರತಿದಿನ ಬೆಳಗ್ಗೆ ಭಜನೆ, ಬೆಳಗ್ಗೆ ಮತ್ತು ಸಾಯಂಕಾಲ ಶ್ರೀ ದುರ್ಗಾ ನಮಸ್ಕಾರ ಪೂಜೆ, ಮಧ್ಯಾಹ್ನ ಗುರುಪಾದುಕಾ ಪೂಜೆ, ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಶಿಷ್ಯ ವೃಂದದವರು ಚಾತುರ್ಮಾಸ್ಯದ ಪರ್ವಕಾಲದಲ್ಲಿ ಜಗದ್ಗುರುಗಳನ್ನು ಸಂದರ್ಶಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಬೇಕೆಂದು ವಿನಂತಿಸಲಾಗಿದೆ.