ಕಾಸರಗೋಡು: ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಆಸಾದಿಕ ಅಮೃತ್ ಮಹೋತ್ಸವದ ಭಾಗವಾಗಿ "ಉಜ್ವಲ್ ಭಾರತ್ ಉಜ್ವಲ್ ಭವಿμï ಪವರ್ @2047" ವಿದ್ಯುತ್ ಮಹೋತ್ಸವ ದೇಶದೆಲ್ಲೆಡೆ ನಡೆಯುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿದ್ಯುತ್ ಇಲಾಖೆಯಲ್ಲಿ ಗಳಿಸಿದ ಒಳಿತುಗಳನ್ನು ಜನರಿಗೆ ತಲುಪಿಸಲು ಸಾರ್ವಜನಿಕ ಸಹಭಾಗಿತ್ವ ವನ್ನು ತಿಳಿಯಲು ವಿದ್ಯುತ್ ಮಂತ್ರಾಲಯ ದೇಶ ವ್ಯಾಪಕವಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಬಿಜಲಿ ಮಹೋತ್ಸವ ಇಂದು (ಜುಲೈ 30) ಬೆಳಗ್ಗೆ 10: 30ಕ್ಕೆ ಕಾಸರಗೋಡು ಮುನ್ಸಿಪಲ್ ಸಭಾಂಗಣ ದಲ್ಲಿಯೂ ಮಧ್ಯಾಹ್ನ ನಂತರ 2:30ಕ್ಕೆ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ನಲ್ಲಿಯೂ ನಡೆಯಲಿರುವುದು. ವಿದ್ಯುತ್ ಇಲಾಖೆಯು ಗಳಿಸಿದ ಒಳಿತುಗಳನ್ನು ಗಣ್ಯರು ಜನರೊಂದಿಗೆ ಹಂಚಿಕೊಳ್ಳಲಿರುವರು. ಅಲ್ಲದೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಗಳೂ, ಮೂಕ ನಾಟಕಗಳು ಮತ್ತು ವಿದ್ಯುತ್ ಇಲಾಖೆಯ ಕುರಿತಾದ ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರು, ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಜಿಲ್ಲೆಯಲ್ಲಿ ಬಿಜಲಿ ಮಹೋತ್ಸವ ಇಂದು
0
ಜುಲೈ 30, 2022