ಕಾಸರಗೋಡು: ವನಮಹೋತ್ಸವ ಅಂಗವಾಗಿ ಕಾಸರಗೋಡು ರೋಟರಿ ಕ್ಲಬ್ ಹಾಗೂ ಸೋಶಿಯಲ್ ಫಾರೆಸ್ಟ್ರಿ ಕಾಸರಗೋಡು ವಿಭಾಗದ ಸಹಯೋಗದಲ್ಲಿ ವೈದ್ಯಕೀಯ ಕಾಲೇಜು ಆವರಣದ ಪರಿಸರದಲ್ಲಿ ಮರವಾಗಿ ಬೆಳೆಯಬಲ್ಲ 500 ಸಸಿಗಳನ್ನು ನೆಡುವ ಮೂಲಕ ರೋಟರಿ ವನ ನಿರ್ಮಾಣದ ಯೋಜನೆಗೆ ಚಾಲನೆ ನೀಡಲಾಯಿತು.
ಸಮಾರಂಭವನ್ನು ರೋಟರಿ ಅಧ್ಯಕ್ಷ ಮೊಗ್ರಾಲ್ ಹಮೀದ್ ಯೋಜನೆ ಉದ್ಘಾಟಿಸಿದರು.
ಸೋಶ್ಯಲ್ ಫಾರೆಸ್ಟ್ರಿ ಅಸಿ. ಕನ್ಸರ್ವೇಟರ್ ಧನೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅತಿಥಿ ಗಣೇಶ್ ಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು, ಪಂಚಾಯಿತಿಗಳು, ಸರ್ಕಾರೇತರ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯೀಕರಣ ಯೋಜನೆ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಅಭಿವೃದ್ಧಿ ನೆಪದಲ್ಲಿ ತೆರವುಗೊಳಿಸುವ ಮರಗಳ ಬದಲಾಗಿ ಸಸಿಗಳನ್ನು ನೆಟ್ಟುಬೆಳೆಸಲು ಮುಂದಾಗಬೇಕು ಎಂದು ತಿಳಿಸಿದರು. ವೈದ್ಯಕೀಯ ಮಹಾವಿದ್ಯಾಲಯದ ಪ್ರಭಾರ ಅಧೀಕ್ಷಕ ಡಾ.ಆಶಿಶ್ ಜಾರ್ಜ್ ಅಧ್ಯಕ್ಷತೆ ವಹಿಸಿದ್ದರು. ವಿಜಿತ್ ರಾಂಕೃಷ್ಣನ್, ಗೌತಂ ಭಕ್ತ, ನರ್ಸಿಂಗ್ ಸೂಪರಿಂಟೆಂಡೆಂಟ್ ಕತ್ರಿನಾಮ್ಮ, ಎಂ.ಕೆ ರಾಧಾಕೃಷ್ಣನ್, ಎಂ.ಕೆ ದಿನೇಶ್, ನಾಗೇಶ್ ತೆರುವತ್, ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.
ಕಚೇರಿ ಅಧೀಕ್ಷಕ ಅಲಿ ಅಕ್ಬರ್ ಸ್ವಾಗತಿಸಿದರು. ರವಿ ಪಾಟೋಳಿ ವಂದಿಸಿದರು.