ತ್ರಿಶೂರ್: ಮದರಸಾಗಳಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಅಧ್ಯಕ್ಷ ಸೈಯದ್ ಜೆಫ್ರಿ ಮುತ್ತುಕೋಯ ತಂಙಳ್ ಹೇಳಿದರು. ಕಾಲ ಬದಲಾದಂತೆ ಮದರಸಾಗಳಿಗೂ ಬದಲಾವಣೆಗಳು ಬೇಕಾಗುತ್ತವೆ. ಕಲಿಕಾ ಪದ್ಧತಿಯಲ್ಲಿ ಬದಲಾವಣೆ ಆಗಬೇಕು ಎಂದು ಚೆಂತ್ರಪಿನ್ನಿ ಅಲುವತ್ತೆರುವಿನಲ್ಲಿ ನಿರ್ಮಿಸಿರುವ ಹಿದಾಯತುಲ್ ಇಸ್ಲಾಂ ಮದರಸಾದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಹೇಳಿದರು.
ಸೈಯದ್ ಜೆಫ್ರಿ ಮುತ್ತುಕೋಯ ತಂಙÀಳ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಮದರಸಾಗಳು ಬದಲಾಗದಿದ್ದರೆ ಓದಲು ಮಕ್ಕಳೇ ಇರುವುದಿಲ್ಲ. ಅದಕ್ಕಾಗಿಯೇ ಸಮಸ್ತದ ಮದರಸಾಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂ ಅಳವಡಿಸಲಾಗುತ್ತಿದೆ. ವೈಜ್ಞಾನಿಕ ವಿಧಾನದಲ್ಲಿ ಬದಲಾವಣೆ ಅನಿವಾರ್ಯ. ಆದರೆ ಕಾಲ ಕಾಲಾಂತರಗಳಿಂದ ನಡೆಯುತ್ತಿರುವ ಅಧ್ಯಯನ ವಿಚಾರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜೆಫ್ರಿ ತಂಙಳ್ ತಂಗಳ್ ತಿಳಿಸಿದ್ದಾರೆ.
ಮದರಸಾ ಶಿಕ್ಷಣದಲ್ಲಿ ಕಾಲಕ್ಕನುಸರಿಸಿ ಬದಲಾವಣೆ ಬೇಕು; ಬದಲಾವಣೆ ಇಲ್ಲದಿದ್ದರೆ ಕಲಿಯುವ ಮಕ್ಕಳೇ ಇರುವುದಿಲ್ಲ: ಸೈಯದ್ ಜೆಫ್ರಿ ಮುತ್ತುಕೋಯ ತಂಙಳ್
0
ಜುಲೈ 26, 2022