ಪಾಲಕ್ಕಾಡ್: ಒಲಿಂಪಿಯನ್ ಪಿಟಿ ಉಷಾ ರೈಲ್ವೇಸ್‍ನಿಂದ ಸ್ವಯಂ ನಿವೃತ್ತಿಯಾಗಿದ್ದಾರೆ. ಎರಡು ವರ್ಷಗಳ ಸೇವಾವಧಿ ಬಾಕಿ ಇರುವಾಗಲೇ ವಿಆರ್ ಎಸ್ ತೆಗೆದುಕೊಂಡು ನಿವೃತ್ತರಾದರು. ಮೊನ್ನೆ ಪಾಲಕ್ಕಾಡ್ ವಿಭಾಗೀಯ ಕಚೇರಿಯಲ್ಲಿ ಪಿಟಿ ಉಷಾ ಅವರ ಕೊನೆಯ ಕೆಲಸದ ದಿನವಾಗಿತ್ತು. ಡಿಆರ್‍ಎಂ ತ್ರಿಲೋಕ್ ಕೊಠಾರಿ ಅವರು ಪಿಟಿ ಉಷಾ ಅವರಿಗೆ ಉಡುಗೊರೆ ನೀಡಿ ಬೀಳ್ಕೊಟ್ಟರು. ಅವರು 1986 ರಲ್ಲಿ ರೈಲ್ವೆಗೆ ನೇಮಕಗೊಂಡಿದ್ದರು.
ಮೊನ್ನೆಯಷ್ಟೇ ಪಿಟಿ ಉಷಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಪಿಟಿ ಉಷಾ ಅವರು ಎಲ್ಲಾ ಭಾರತೀಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಉಷಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಗೌರವಾನ್ವಿತ ಪಿಟಿ ಉಷಾ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದ್ದಾರೆ. ಅವರು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಚಿರಪರಿಚಿತ. ಇದಲ್ಲದೆ, ಯುವ ಕ್ರೀಡಾಪಟುಗಳಿಗೆ ಕೊಡುಗೆ ನೀಡಲು ಅವರ ಪ್ರಯತ್ನಗಳು ಅಷ್ಟೇ ಮುಖ್ಯವಾಗಿವೆ. ‘ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕೆ ಅಭಿನಂದನೆಗಳು’ ಎಂದು ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪಿ.ಟಿ.ಉಷಾ ಅವರ ರಾಜ್ಯಸಭೆ ಪ್ರವೇಶಕ್ಕೆ ರಾಜಕೀಯ, ಸಾಂಸ್ಕøತಿಕ, ಕಲಾ ಕ್ಷೇತ್ರದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.