ಕೋಝಿಕ್ಕೋಡ್: ಬಲುಶೇರಿಯಲ್ಲಿ ಎಸ್ ಡಿ ಪಿ ಐ ಪೋಸ್ಟರ್ ಹರಿದ ಆರೋಪದ ಮೇಲೆ ಡಿವೈಎಫ್‍ಐ ಮುಖಂಡ ಜಿಷ್ಣು ರಾಜ್‍ಗೆ ಥಳಿಸಿದ ಪ್ರಕರಣದಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ. ಮುಸ್ಲಿಂ ಲೀಗ್ ಕಾರ್ಯಕರ್ತರಾದ ಮುಹಮ್ಮದ್ ಫೈಜ್ ಮತ್ತು ಮುರ್ಷಿದ್ ಬಂಧಿತರು. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಹಾಗೂ ಎಸ್‍ಡಿಪಿಐ ಕಾರ್ಯಕರ್ತ ಸಫೀರ್ ಮೊನ್ನೆ ಶರಣಾಗಿದ್ದ. ಜಿಷ್ಣುವನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲಲು ಸಫೀರ್ ಯತ್ನಿಸಿದ್ದ.
ಎಸ್ ಡಿ ಪಿ ಐ ಫ್ಲಕ್ಸ್ ಬೋರ್ಡ್ ಹರಿದ ಆರೋಪದ ಮೇಲೆ ಡಿವೈಎಫ್‍ಐ ಕಾರ್ಯಕರ್ತರು, ಸಿಪಿಎಂ ಬೆಂಬಲಿಗರು ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರು ಸೇರಿದಂತೆ ಗುಂಪು ಜಿಷ್ಣುರಾಜ್ ಅವರನ್ನು ಅಮಾನುಷವಾಗಿ ಥಳಿಸಿದೆ. ಪ್ರಕರಣದಲ್ಲಿ ಡಿವೈಎಫ್‍ಐ ಕಾರ್ಯಕರ್ತರು ಹಾಗೂ ಸಿಪಿಎಂ ಬೆಂಬಲಿಗರನ್ನು ರಕ್ಷಿಸಲು ಪೋಲೀಸರು ನಡೆಸಿದ ಪ್ರಯತ್ನ ವಿಫಲವಾಯಿತು.