ನವದೆಹಲಿ: ಖ್ಯಾತ ಒಲಿಂಪಿಯನ್, ಕ್ರೀಡಾಪಟು ಪಿಟಿ ಉಷಾ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಸಭಾಂಗಣದಲ್ಲಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಬೆಳಗ್ಗೆ 11 ಗಂಟೆಗೆ ಸಮಾರಂಭ ನಡೆಯಿತು. ಪ್ರಮಾಣವಚನ ಹಿಂದಿಯಲ್ಲಿತ್ತು.
ಹಿಂದಿ ಹೆಚ್ಚು ಜನ ಮಾತನಾಡುವ ಕಾರಣ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಾಗಿದೆ ಎಂದು ಪಿ.ಟಿ.ಉಷಾ ತಿಳಿಸಿದರು. ರಾಷ್ಟ್ರಪತಿ ರಾಮನಾಥ್ ಗೋವಿಂದ್ ಅವರು ಕ್ರೀಡಾ ಪಟುವಾಗಿ ಪಿಟಿ ಉಷಾ ಅವರನ್ನು ಸಂಸದರನ್ನಾಗಿ ಶಿಫಾರಸು ಮಾಡಿದ್ದರು. ಸುರೇಶ್ ಗೋಪಿ ನಂತರ ಪಿಟಿ ಉಷಾ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಎರಡನೇ ಕೇರಳೀಯರು.
ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಲು ಪಿಟಿ ಉಷಾ ಅವರ ಕುಟುಂಬ ಕೂಡ ಸಂಸತ್ತಿನಲ್ಲಿ ಹಾಜರಿದ್ದರು. ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಬಹುದು ಎಂದು ಪ್ರಮಾಣ ವಚನ ಸ್ವೀಕರಿಸುವ ಮುನ್ನ ಹೇಳಿದ್ದರು.