ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದು, ಹೊಳೆಗಳು ತುಂಬಿ ಹರಿಯಲಾರಂಭಿಸಿದೆ. ಈ ಮಧ್ಯೆ ಜಿಲ್ಲೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರು ನಾಪತ್ತೆಯಾಗಿದ್ದಾರೆ. ಬೇಡಡ್ಕ ಎರಿಞÂಪುಳ ಸನಿಹ ಮುಳ್ಳಂಗೋಡು ಪಾರಡ್ಕ ನಿವಾಸಿ ಕೆ.ಬಿ ಬಾಲಚಂದ್ರನ್(57)ನಾಪತ್ತೆಯಾದವರು. ಇವರು ಮುಳ್ಳಂಗೋಡು ಅಣೆಕಟ್ಟು ಬಳಿ ನೀರಿನಲ್ಲಿ ತೇಲಿಬರುತ್ತಿದ್ದ ತೆಂಗಿನ ಕಾಯಿ ಹಿಡಿಯುವ ಮಧ್ಯೆ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದರು.ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ಪತ್ತೆಸಾಧ್ಯವಾಗಿಲ್ಲ. ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ 12ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.