ತಿರುವನಂತಪುರ: ತಿರುವನಂತಪುರಂನಲ್ಲಿ ಐಸಿಸ್ ನೊಂದಿಗೆ ನಂಟುಹೊಂದಿರುವವರು ಇರುವ ಮಾಹಿತಿ ಆಧರಿಸಿ ಎನ್ ಐಎ ತಂಡ ಭಾನುವಾರ ತಿರುವನಂತಪುರಂ ಜಿಲ್ಲೆಯಲ್ಲಿ ವ್ಯಾಪಕ ಶೋಧ ನಡೆಸಿದೆ.
ತಮಿಳುನಾಡು ಮೂಲದ ಸಾದಿಕ್ ಬಾμÁ ಎಂಬವರ ಪತ್ನಿ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಅವರು ತಿರುವನಂತಪುರಂನಲ್ಲಿದ್ದಾರೆ ಎಂಬ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುತ್ತಿದೆ.
ಕಳೆದ ಫೆಬ್ರುವರಿಯಲ್ಲಿ ಮೈಲತುತುರೈ ಎಂಬಲ್ಲಿ ಪೆÇಲೀಸರನ್ನು ಅಪಾಯಕ್ಕೆ ಸಿಲುಕಿಸಿ ಸಾದಿಕ್ ಮತ್ತು ತಂಡ ಪರಾರಿಯಾಗಿತ್ತು. ಅವರು ಐಸಿಸ್‍ಗೆ ನಿಧಿ ಸಂಗ್ರಹಿಸಲು ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಐಎಸ್‍ಐಎಸ್‍ಗೆ ಸೇರ್ಪಡೆಗೊಳ್ಳಲು ಪ್ರತ್ಯೇಕತಾವಾದಿ ಸಂಘಟನೆಗಳನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ.
ತಿರುವನಂತಪುರದಲ್ಲಿ ನಡೆಸಿದ ತನಿಖೆಯಲ್ಲಿ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ. ಹಾರ್ಡ್ ಡಿಸ್ಕ್ ಮತ್ತು ಸಿಮ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಿರುವನಂತಪುರದಲ್ಲಿ ಉಗ್ರ? ಎನ್ ಐಎ ದಾಳಿ; ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ದಾಖಲೆಗಳ ವಶ
0
ಜುಲೈ 31, 2022
Tags