HEALTH TIPS

ರಾಷ್ಟ್ರಪತಿಯವರಿಗೆ 'ದ್ರೌಪದಿ' ಹೆಸರು ಇಟ್ಟವರು ಯಾರು? ಬಾಲ್ಯಜೀವನದ ನೆನಪು ಮೆಲುಕು ಹಾಕಿದ ಮುರ್ಮು

 

      ಭುವನೇಶ್ವರ: 2022ರ ರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಮೈತ್ರಿಕೂಟ ದ್ರೌಪದಿ ಮುರ್ಮು (Draupadi Murmu) ಅವರ ಹೆಸರನ್ನು ಘೋಷಿಸಿದಾಗ ಸೋಷಿಯಲ್ ಮೀಡಿಯಾದಲ್ಲಿ ಅವರ ಹೆಸರಿನ ಬಗ್ಗೆ ಭಾರೀ ಕಮೆಂಟ್ ಗಳು ವ್ಯಕ್ತವಾದವು. ಭಾರತಕ್ಕೆ ದ್ರೌಪದಿ ರಕ್ಷೆ, ದುಷ್ಟರ ಸಂಹಾರಕ್ಕೆ ದ್ರೌಪದಿ ಬರುತ್ತಿದ್ದಾರೆ ಎಂದೆಲ್ಲ ಮಹಾಭಾರತದ ಪ್ರಮುಖ ಪಾತ್ರಧಾರಿ, ಪಂಚ ಪಾಂಡವರ ಪತ್ನಿ ದ್ರೌಪದಿಯನ್ನಿಟ್ಟುಕೊಂಡು ಕಮೆಂಟ್ ಮಾಡುತ್ತಿದ್ದರು. 

       ದ್ರೌಪದಿ ಮುರ್ಮು ಬಹು ಅಪರೂಪದ ಹೆಸರು, ಭಾರತದ ಮೊದಲ ಬುಡಕಟ್ಟು ಜನಾಂಗದ ಮಹಿಳೆ ದೇಶದ 15ನೇ ರಾಷ್ಟ್ರಪತಿಯಾಗಿದ್ದಾರೆ (15th president of India). ಅವರಿಗೆ ಈ ದ್ರೌಪದಿ ಹೆಸರನ್ನು ಸೂಚಿಸಿದ್ದು ಶಾಲೆಯಲ್ಲಿ ಶಿಕ್ಷಕರೊಬ್ಬರಂತೆ. ಇದರ ಹಿಂದೆ ಆಸಕ್ತಿಕರ ವಿಷಯವಿದೆ.

       ಕೆಲವು ಸಮಯಗಳ ಹಿಂದೆ ಒಡಿಯಾ ವಿಡಿಯೊ ಮ್ಯಾಗಜಿನ್ ಗೆ ನೀಡಿದ್ದ ಸಂದರ್ಭದಲ್ಲಿ ತಮ್ಮ ಪೋಷಕರು ಇಟ್ಟಿದ್ದ 'ಪುಟಿ' ಹೆಸರನ್ನು ಶಾಲೆಯಲ್ಲಿ ಶಿಕ್ಷಕರು ಬದಲಿಸಿದರಂತೆ. ನಾನು ಮಯೂರ್ ಭಂಜ್ ಜಿಲ್ಲೆಯಲ್ಲಿ ಹುಟ್ಟಿದ್ದು ಮತ್ತೊಂದು ಜಿಲ್ಲೆಯ ಶಿಕ್ಷಕರು ನನ್ನ ಹೆಸರನ್ನು ದ್ರೌಪದಿ ಎಂದು ಬದಲಿಸಿದರು, ಪುಟಿ ಹೆಸರು ಚೆನ್ನಾಗಿಲ್ಲ ದ್ರೌಪದಿ ಎಂದಿಟ್ಟುಕೋ ಎಂದು ಅಧ್ಯಾಪಕರು ಸೂಚಿಸಿದರು ಎಂದು ಅಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

          1960ರ ದಶಕದಲ್ಲಿ ನಾವು ಶಾಲೆಗೆ ಹೋಗುತ್ತಿದ್ದಾಗ ಬಲಸೊರೆ ಅಥವಾ ಕಟಕ್ ಜಿಲ್ಲೆಯಿಂದ ಶಿಕ್ಷಕರು ನಮ್ಮೂರಿಗೆ ಕಲಿಸಲು ಬರುತ್ತಿದ್ದರು. ಒಬ್ಬ ಶಿಕ್ಷಕರು ನನ್ನ ಮೊದಲಿನ ಹೆಸರು ಚೆನ್ನಾಗಿಲ್ಲ ಎಂದು ದ್ರೌಪದಿ ಎಂದಿಟ್ಟರು. ದ್ರೌಪದಿಯಿಂದ ದೊರ್ಪ್ದಿ ಎಂದಾಗಿತ್ತಂತೆ. 

            ದ್ರೌಪದಿಯವರ ಸರ್ ನೇಮ್ ಆರಂಭದಲ್ಲಿ ಟುಡು ಆಗಿತ್ತಂತೆ. ನಂತರ ಅವರು ಶ್ಯಾಮ್ ಚರಣ್ ಟುಡು ಅವರನ್ನು ಮದುವೆಯಾದ ಬಳಿಕ ಸರ್ ನೇಮ್ ಮುರ್ಮು ಎಂದು ಬದಲಾಯಿತಂತೆ.

           ಮಹಿಳಾ ರಾಷ್ಟ್ರಪತಿಯಾಗಿ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಬಗ್ಗೆ ಹೇಳುವುದೇನು?: ಪುರುಷರ ಪ್ರಾಬಲ್ಯವಿರುವ ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಳನ್ನು ನೀಡುವುದರಲ್ಲಿ ಬದಲಾವಣೆ ಮಾಡುವುದರಿಂದ ಈ ಪರಿಸ್ಥಿತಿಯನ್ನು ಬದಲಾಯಿಸಬಹುದು, ಎಂದು ಹೇಳಿದ್ದಾರೆ. ಮಹಿಳೆಯರು ಗುಣಾತ್ಮಕ ರಾಜಕೀಯದತ್ತ ಗಮನಹರಿಸಬೇಕು. ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳಲ್ಲಿ ಸಬಲೀಕರಣಕ್ಕಾಗಿ ಧ್ವನಿ ಎತ್ತಬೇಕು ಎಂದು ಮುರ್ಮು ಹೇಳುತ್ತಾರೆ. 

            ಮಹಿಳೆಯರು ಜನರ ಸಮಸ್ಯೆಗಳನ್ನು ಸರಿಯಾದ ವೇದಿಕೆಗಳಲ್ಲಿ ಎತ್ತಿ ತೋರಿಸುವ ಮೂಲಕ ತಮ್ಮ ಗುಣಾತ್ಮಕ ಕುಶಾಗ್ರಮತಿಯನ್ನು ಬಲಪಡಿಸಬೇಕು ಎಂದಿದ್ದರು. 

              2020ರ ಫೆಬ್ರವರಿ 18ರಂದು ಬ್ರಹ್ಮಾಕುಮಾರಿ ಗಾಡ್ಲಿವುಡ್ ಸ್ಟುಡಿಯೋಗೆ ನೀಡಿದ ಮತ್ತೊಂದು ಸಂದರ್ಶನದಲ್ಲಿ, ಮುರ್ಮು ತನ್ನ 25 ವರ್ಷದ ಹಿರಿಯ ಮಗ ಲಕ್ಷ್ಮಣ್ ಸಾವಿನ ನಂತರದ ಪರಿಸ್ಥಿತಿಯನ್ನು ಹಂಚಿಕೊಂಡಿದ್ದರು. ನನ್ನ ಮಗನ ಸಾವಿನ ನಂತರ ನಾನು ಸಂಪೂರ್ಣವಾಗಿ ಕುಸಿದುಹೋಗಿದ್ದೆ. ಸುಮಾರು ಎರಡು ತಿಂಗಳ ಕಾಲ ನಾನು ಖಿನ್ನತೆಗೆ ಒಳಗಾಗಿದ್ದೆ. ಜನರನ್ನು ಭೇಟಿಯಾಗುವುದನ್ನು ನಿಲ್ಲಿಸಿ ಮನೆಯಲ್ಲಿಯೇ ಇದ್ದೆ. ನಂತರ ನಾನು ಈಶ್ವರಿ ಪ್ರಜಾಪತಿ ಬ್ರಹ್ಮಕುಮಾರಿಯಲ್ಲಿ ಸೇರಿಕೊಂಡು ಯೋಗ ಮತ್ತು ಧ್ಯಾನಕ್ಕೆ ಒಳಗಾದೆ ಎಂದಿದ್ದರು. 

            ದ್ರೌಪದಿ ಮುರ್ಮು ಅವರು 2013 ರಲ್ಲಿ ತಮ್ಮ ಕಿರಿಯ ಮಗ ಸಿಪುನ್ ಅವರನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡರು, ತರುವಾರ ಅವರ ಸಹೋದರ ಮತ್ತು ತಾಯಿ ನಿಧನರಾದರು. ನಾನು ನನ್ನ ಜೀವನದಲ್ಲಿ ಸುನಾಮಿಯನ್ನು ಎದುರಿಸಿದ್ದೇನೆ. ಆರು ತಿಂಗಳ ಅವಧಿಯಲ್ಲಿ ನನ್ನ ಕುಟುಂಬದ ಮೂರು ಸಾವುಗಳನ್ನು ನೋಡಿದ್ದೇನೆ ಎಂದರು. ಅವರ ಪತಿ ಶ್ಯಾಮ್ ಚರಣ್ ಕೂಡ ಅನಾರೋಗ್ಯಕ್ಕೆ ತುತ್ತಾಗಿ 2014ರಲ್ಲಿ ತೀರಿಕೊಂಡಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries