ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ರಕ್ಷಕ-ಶಿಕ್ಷಕ ಸಂಘದ 2022-2023ನೇ ಸಾಲಿನ ಮಹಾ ಸಭೆ ಪಿ.ಟಿ.ಎ ಅಧ್ಯಕ್ಷ ಕೃಷ್ಣಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ನೂತನ ಅಧ್ಯಕ್ಷರಾಗಿ ಕೃಷ್ಣಪ್ರಸಾದ್ ಉಪಾಧ್ಯಕ್ಷರಾಗಿ ಸಿದ್ಧಿಕ್ ಹಾಗೂ ಉಮರ್, ಮಾತೃ ಸಂಘದ ಅಧ್ಯಕ್ಷೆಯಾಗಿ ಸೌಮ್ಯಪ್ರಕಾಶ್, ಉಪಧ್ಯಾಕ್ಷೆಯಾಗಿ ಸ್ವಪ್ನ ಹಾಗೂ ಸಾಜಿದ ಅವರನ್ನು ಆರಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕ ಶ್ರೀಧರ ರಾವ್ ಆರ್.ಎಂ, ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ಪಿ.ಟಿ.ಎ ಅಧ್ಯಕ್ಷೆ ಸ್ವಪ್ನ, ಉಪಾಧ್ಯಕ್ಷ ಸಿದ್ಧಿಕ್ ಉಪಸ್ಥಿತರಿದ್ದರು ಶಾಲಾ ಅಧ್ಯಾಪಕರಾದ ರಾಮಚಂದ್ರ ಕೆ.ಎಂ ಕಾರ್ಯಕ್ರಮವನ್ನು ನಿರೂಪಿಸಿದರು. ಬಾಲಕೃಷ್ಣ ಮಾಸ್ತರ್ ವಂದಿಸಿದರು.