ಮಲಪ್ಪುರಂ: ಕಾಡಾನೆ ದಾಳಿಗೆ ಪೋಲೀಸ್ ಪೇದೆ ಗಾಯಗೊಂಡಿದ್ದಾರೆ. ನಿಲಂಬೂರು ಪೆÇೀತ್ಕಲ್ ಕೋಟಲಿ ಪೊಯಿಲ್ ನಲ್ಲಿ ಈ ಘಟನೆ ನಡೆದಿದೆ. ಪೆÇೀತ್ಕಲ್ ಅರಣ್ಯ ಅಟ್ಯಾಚ್ಡ್ ಡ್ಯೂಟಿಯಲ್ಲಿದ್ದ ಸಿವಿಲ್ ಪೋಲೀಸ್ ಅಧಿಕಾರಿ ಸಂಜೀವ್ ಗಾಯಗೊಂಡಿದ್ದಾರೆ. ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸುವಾಗ ಗಾಯಗೊಂಡಿದ್ದಾರೆ.
ಬೆಳಗ್ಗೆ ಸ್ಥಳೀಯರು, ಪೋಲೀಸರು ಹಾಗೂ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಕಾಡಿಗಟ್ಟಲು ಯತ್ನಿಸಿದರು. ಕಾಡಾನೆಗಳು ಚಾಲಿಯಾರ್ ನದಿಗೆ ಅಡ್ಡ ಬಂದಿದ್ದವು. ಮತ್ತೆ ಕಾಡಿಗೆ ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಪೋಲೀಸರ ಮೇಲೆ ದಾಳಿ ನಡೆಸಿದವು.
ಪೋಲೀಸರ ಎದೆಗೆ ಕಾಡಾನೆ ದಾಳಿಯಿಂದ ಗಾಯವಾಗಿದೆ. ಕೂಡಲೇ ಅವರನ್ನು ಸಹೋದ್ಯೋಗಿಗಳು ನಿಲಂಬೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.