ಪೆರ್ಲ: ಸಂಸ್ಕೃತ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಉದ್ದೇಶದಿಂದ ಕಾಲಡಿ ಸಂಸ್ಕೃತ ವಿಶ್ವ ವಿದ್ಯಾಲಯದ ವತಿಯಿಂದ ಸಾರ್ವಜನಿಕರಿಗಾಗಿ ಸಂಸ್ಕೃತ ಕಲಿಕಾ ಕೇಂದ್ರವನ್ನು ಪೆರ್ಲ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ಆರಂಭಿಸಲಾಗಿದೆ. ವಯಸ್ಸಿನ ಹಾಗೂ ಶಿಕ್ಷಣ ಅರ್ಹತೆಯ ಮಿತಿಗಳಿಲ್ಲದೆ ಸಾರ್ವಜನಿಕರಿಗೆ ಹೆಸರು ನೊಂದಾವಣೆಗೆ ಅವಕಾಶ ಕಲ್ಪಿಸಲಾಗಿದ್ದು ತರಗತಿಯ ಕಲಿಕಾ ಸಾಮಾಗ್ರಿಗಳು ಹಾಗೂ ಕೋರ್ಸು ಪೂರ್ಣ ಉಚಿತವಾಗಿದೆ. ಕೋರ್ಸು ಪೂರ್ತಿಗೊಳಿಸುವವರಿಗೆ ವಿಶ್ವವಿದ್ಯಾಲಯದ ಪ್ರಮಾಣಪತ್ರ ನೀಡಲಾಗುತ್ತದೆ. ಹೆಸರು ನೊಂದಾವಣೆಗೆ ಜುಲೈ 21 ಅಂತಿಮ ದಿನಾಂಕವಾಗಿದ್ದು ಹೆಚ್ಚಿನ ವಿವರ ಹಾಗೂ ಹೆಸರು ನೊಂದಾಯಿಸಲು 9447737959 ಅಥವ 9539552698 ನಂಬ್ರವನ್ನು ಸಂಪರ್ಕಿಸಲು ಕೋರಲಾಗಿದೆ.