ಕಾಸರಗೋಡು: ದೋಣಿ ಅಪಘಾತದಲ್ಲಿ ಮೃತಪಟ್ಟ ಮೀನುಗಾರರಾದ ಸಂದೀಪ್, ರತೀಶ್ ಹಾಗೂ ಕಾರ್ತಿಕ್ ಅವರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡು ಕಡಪ್ಪುರದಲ್ಲಿ ಶ್ರದ್ಧಾಂಜಲಿ ಸಭೆ ಆಐಓಜಿಸಲಾಯಿತು.
ಮೀನುಗಾರ ಕಾರ್ಮಿಕರ ಸಂಘ(ಬಿಎಂಎಸ್)ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಡಪ್ಪುರ ಶ್ರೀ ಕುರುಂಬಾ ಭಗವತೀ ಕ್ಷೇತ್ರದ ಆಚಾರಕರ್ಮಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಮೀನುಗಾರರ ಸಂಘದ ರಾಜ್ಯ ಕಾರ್ಯದರ್ಶಿ ಪಿ.ದಿನೇಶ್‍ಮ ಜಿಲ್ಲಾಧ್ಯಕ್ಷ ಶರತ್ ಕಡಾಪುರ, ಜಿಲ್ಲಾ ಕೋಶಾಧಿಕಾರಿ ರಮೇಶ ಕಡಾಪುರ, ಬಿಎಂಎಸ್ ಪದಾಧಿಕಾರಿಗಳಾದ ಬಾಲಕೃಷ್ಣ ನೆಲ್ಲಿಕುಂಜೆ, ಶಿವಪ್ರಸಾದ್ ತಾಳಿಪಡ್ಪು, ಜನಾರ್ದನ ಕಡಪ್ಪುರ, ಹರೀಶ್ ಕಡಪ್ಪುರ, ರತೀಶ್ ಕಡಾಪುರ ಹಾಗೂ ಮೃತಪಟ್ಟ ಮೀನುಗಾರರ ಕುಟುಂಬಸ್ಥರು, ಮೀನುಗಾರರ ಬಂಧುಗಳು ಪುಷ್ಪ ನಮನ ಸಲ್ಲಿಸಿದರು.