ಕಾಸರಗೋಡು: ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಯಲು ಕಾಸರಗೋಡು ನಗರಸಭೆ ಅಗತ್ಯ ಕ್ರಮ ಆರಂಭಿಸಿದೆ. ಜನರಿಗೆ ಕೈಗೆಟಕುವ ರೀತಿಯಲ್ಲಿ ಸ್ಟೀಲ್ ಲೋಟ ಹಾಗೂ ಪ್ಲೇಟ್‍ಗಳನ್ನು ಬಾಡಿಗೆಗೆ ನೀಡಲು ಮುಂದಾಗಿದೆ. ಇದಕ್ಕಾಗಿ ನಗರಸಭಾ ಕುಟುಂಬಶ್ರೀ ಘಟಕ ಒಂದು ಸಾವಿರ ಊಟದ ಪ್ಲೇಟ್ ಹಾಗೂ ಗ್ಲಾಸ್‍ಗಳನ್ನು ಖರೀದಿಸಿ ಸಣ್ಣ ಮೊತ್ತದ ಬಾಡಿಗೆಗೆ ಜನರಿಗೆ ತಲುಪಿಸಲು ಮುಂದಾಗಿದೆ. ಮದುವೆ, ಆರತಕ್ಷತೆ, ಗೃಹಪ್ರವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲೇಟ್, ಕಂಟೈನರ್, ಗ್ಲಾಸ್ ಇತ್ಯಾದಿಗಳನ್ನು ಪ್ರತಿ ಸಂದರ್ಭದಲ್ಲೂ ಆಹಾರ ಬಡಿಸಲು ಬಳಸಲಾಗುತ್ತಿದ್ದು, ನಂತರ ಅವುಗಳನ್ನು ಎಸೆಯಲಾಗುತ್ತದೆ. ಇದು ವ್ಯಾಪಕ ಪರಿಸರ ಹಾನಿಗೆ ಕಾರಣವಾಗುತ್ತಿದ್ದು ಸಮಸ್ಯೆಗೆ ಪರಿಹಾರವಾಗಿ ನಗರಸಭೆ ಈ ಯೋಜನೆ ಹಮ್ಮಿಕೊಂಡಿದೆ. ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿರುವ ಈ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯ ಜನರಿಗೆ ಇದು ತುಂಬಾ ಉಪಯುಕ್ತವಾಗಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಗ್ಲಾಸ್, ಪ್ಲೇಟ್‍ಗಳಿಗೆ ವಿದಾಯ ಹೇಳಿದ ಕಾಸರಗೋಡು ನಗರಸಭೆ
0
ಜುಲೈ 25, 2022