ಕಾಸರಗೋಡು: ಜಿಲ್ಲೆಯನ್ನು ಹಸಿರಿನಿಂದ ಕಂಗೊಳಿಸುವ ಉದ್ದೇಶದಿಂದ ಭೂಮಿಗೊಂದು ನೆರಳು ಯೋಜನೆಯ ಭಾಗವಾಗಿ ಉದುಮ ಗ್ರಾಮ ಪಂಚಾಯಿತಿ ಕಾರ್ಯೋನ್ಮುಖವಾಗಿದೆ.
ರಾಜ್ಯ ಜೀವವೈವಿಧ್ಯ ಮಂಡಳಿ(ಬಿಎಂಸಿ)ಬಾರ ಪಣ್ಣರತ್ ಕಾವ್ ಸಮಿತಿ, ವಿವಿಧ ಸ್ಥಳೀಯ ಸಂಘಟನೆಗಳ ಸಹಕಾರಗಳೊಂದಿಗೆ ಪರಿಸರ ಪುನರ್ ನವೀಕರಣ ಭಾಗವಾಗಿ ಆಯೋಜಿಸಲಾದ ಹಸಿರು ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅಪರಾಧ ವಿಭಾಗದ ಡಿವೈಎಸ್‍ಪಿ ಹಾಗೂ ರಾಜ್ಯ ಜೈವ ವೈವಿಧ್ಯ ಬೋರ್ಡ್ ಮಾಜಿ ಸದಸ್ಯ ಡಾ.ವಿ. ಬಾಲಕೃಷ್ಣನ್ ಉದ್ಘಾಟಿಸಿದರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.
ಜೀವವೈವಿಧ್ಯ ಮಂಡಳಿ ಜಿಲ್ಲಾ ಸಂಯೋಜಕಿ ಅಖಿಲಾ, ಚಂದ್ರನ್ ಪಳ್ಳಿತೋಟ್ಟ, ಮೋಹನ್ ಮಾಂಗಾಟ್, ಪಿ.ವಿ.ಜಯಂತಿ ಟೀಚರ್, ಮೋಹನನ್ ಮಾಸ್ತರ್, ಅನಿತಾ ಟೀಚರ್, ಸತ್ಯಭಾಮಾ ಟೀಚರ್, ಚಂದುಕುಟ್ಟಿ ವೈಟಿಕುನ್ನು, ಪುμÁ್ಪ ಟೀಚರ್, ಅಸ್ಲಂ ಖಾನ್, ನಾರಾಯಣನ್ ಉದುಮ, ಕೆ.ಟಿ.ಜಯನ್, ಜಗದೀಶ್ ಆರಾಟ್ ಕಡವ್ ಮತ್ತು ವಿನೋದ್ ಮೇಲ್ ಪುರಂ ಮಾತನಾಡಿದರು. ಸುಕುಮಾರನ್ ಸ್ವಾಗತಿಸಿ, ಮಾಸ್ತರ್ ಪಿ.ಕೆ.ಮುಕುಂದನ್ ವಂದಿಸಿದರು.
ಕಾವಿನ ಜೀವ ವೈವಿಧ್ಯವನ್ನು ಪೆÇೀಷಿಸಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಸ್ತೃತ ಅಧ್ಯಯನ ನಡೆಸಿ ಜೀವವೈವಿಧ್ಯ ದಾಖಲಾತಿ ಸಿದ್ಧಪಡಿಸುವ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಪಂಚಾಯತ್ ಜೀವವೈವಿಧ್ಯ ಮಂಡಳಿಯು ಕಾವನ್ನು ಸ್ಥಳೀಯ ಜೀವವೈವಿಧ್ಯ ಪರಂಪರೆ ಕೇಂದ್ರವಾಗಿ (ಎಲ್.ಬಿ.ಡಿ.ಎಚ್.ಎಸ್) ಪರಿವರ್ತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ.
"ಭೂಮಿಗೊಂದು ನೆರಳು" ಯೋಜನೆಯ ಅಂಗವಾಗಿ ಉದುಮ ಗ್ರಾ.ಪಂ ನಿಂದ ಕಾರ್ಯಕ್ರಮ
0
ಜುಲೈ 31, 2022