ಜಾರ್ಖಂಡ್: ನಾನು ಈ ಹಿಂದೆ ದೇವಘರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಬಂದಿದ್ದೆ. ಈಗ ಅದನ್ನು ಉದ್ಘಾಟನೆ ಮಾಡುತ್ತಿದ್ದೇನೆ. ಈ ಹಿಂದೆ ಯೋಜನೆಗಳ ಘೋಷಣೆಯಾಗಿ 2-3 ಸರ್ಕಾರಗಳ ಬದಲಾವಣೆ ಬಳಿಕ ಶಂಕುಸ್ಥಾಪನೆ ನಡೆಯುತ್ತಿತ್ತು.
ಜಾರ್ಖಂಡ್: ನಾನು ಈ ಹಿಂದೆ ದೇವಘರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಬಂದಿದ್ದೆ. ಈಗ ಅದನ್ನು ಉದ್ಘಾಟನೆ ಮಾಡುತ್ತಿದ್ದೇನೆ. ಈ ಹಿಂದೆ ಯೋಜನೆಗಳ ಘೋಷಣೆಯಾಗಿ 2-3 ಸರ್ಕಾರಗಳ ಬದಲಾವಣೆ ಬಳಿಕ ಶಂಕುಸ್ಥಾಪನೆ ನಡೆಯುತ್ತಿತ್ತು.
ಜಾರ್ಖಂಡ್ನಲ್ಲಿ ಬಾಬಾ ಬೈದ್ಯನಾಥ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ದೇವಘರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಉದ್ಘಾಟನೆ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು. ಇಂದು ನಾವು ಯಾವ ರೀತಿಯ ಕೆಲಸ ಹಾಗೂ ರಾಜಕೀಯ ಸಂಸ್ಕೃತಿ ಮತ್ತು ಆಡಳಿತ ಮಾದರಿ ಬೆಳೆಸಿದ್ದೇವೆ ಎಂದರೆ ನಾವು ಶಂಕು ಸ್ಥಾಪನೆ ಮಾಡಿದ್ದ ಎಲ್ಲವನ್ನೂ ಉದ್ಘಾಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಳಿಕ ಇಂದಿನ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದ ಅವರು, ಅಡ್ಡದಾರಿ (ಶಾರ್ಟ್ ಕಟ್) ರಾಜಕೀಯ ಇಂದಿನ ದೊಡ್ಡ ಸವಾಲು. ಏಕೆಂದರೆ ಅಡ್ಡದಾರಿಯ ರಾಜಕೀಯದಿಂದ ಮತಗಳಿಕೆ ಸುಲಭ. ದೇಶದ ರಾಜಕೀಯ ಶಾರ್ಟ್ಕಟ್ ಮೇಲೆ ಅವಲಂಬಿತವಾಗಿದ್ದರೆ ಅದು ಅಂತಿಮವಾಗಿ ಶಾರ್ಟ್ ಸರ್ಕ್ಯೂಟ್ ಎನಿಸಿಕೊಳ್ಳುತ್ತಿದೆ. ಅಂಥ ರಾಜಕೀಯದಿಂದ ನಾವು ದೂರ ಇರಬೇಕು ಎಂದು ಮೋದಿ ಕಿವಿಮಾತು ಹೇಳಿದರು.