ಕಾಸರಗೋಡು: ದ.ಕ ಜಿಲ್ಲೆಯಲ್ಲಿ ಸರಣಿ ಕೊಲೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾದ್ಯಂತ ಕಟ್ಟೆಚ್ಚರ ಪಾಲಿಸಲಾಗುತ್ತಿದೆ. ಪ್ರವೀಣ್ ನೆಟ್ಟಾರ್ ಹಂತಕರು ಕೇರಳದಿಂದ ತೆರಳಿ ಕೊಲೆ ನಡೆಸಿರುವುದಾಗಿ ಲಭಿಸಿರುವ ಮಾಹಿತಿಯನ್ವಯ ಗುರುವಾರದಿಂದ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅವರ ನಿರ್ದೇಶಾನುಸಾರ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ಆಯೋಜಿಸಲಾಗಿದ್ದು, ಗಡಿ ಪ್ರದೇಶದ ಠಾಣೆಗಳಲ್ಲಿ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ.
ಮಂಜೇಶ್ವರ, ಬದಿಯಡ್ಕ, ಆದೂರು, ರಾಜಾಪುರಂ, ಬೇಡಡ್ಕ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಲಾಗಿದೆ. ಕಣ್ಣೂರು ಮತ್ತು ವಯನಾಡು ಜಿಲ್ಲೆಗಳ ಕರ್ನಾಟಕ ಗಡಿ ಪ್ರದೇಶದಲ್ಲೂ ಪೊಲೀಸ್ ನಿಗಾ ಹೆಚ್ಚಿಸಲಾಗಿದೆ. ಗಡಿ ದಾಟಿಬರುವ ವಾಹನಗಳ ಬಿಗಿ ತಪಾಸಣೆ ಮುಂದುವರಿದಿದೆ. ಶಂಕಿತರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗೊಳಪಡಿಸಲಾಗುತ್ತಿದೆ. ಅಕ್ರಮ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್‍ಪಿ ಪೊಲೀಸರಿಗೆ ಸೂಚಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ಕೊಲೆಪ್ರಕರಣ: ಕಾಸರಗೋಡಲ್ಲಿ ಕಟ್ಟೆಚ್ಚರ
0
ಜುಲೈ 30, 2022