ಕೊಚ್ಚಿ: ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ವಿರುದ್ಧ ಸುಳ್ಳು ಸುದ್ದಿ ನೀಡಿದ ರಿಪೋರ್ಟರ್ ಸುದ್ದಿವಾಹಿನಿಯ ವರದಿಗಾರ ಕ್ಷಮೆಯಾಚಿಸಿದ್ದಾರೆ.
ಪ್ರ್ರಾಚ್ಯವಸ್ತು ವಂಚನೆ ಪ್ರಕರಣದ ಆರೋಪಿ ಮೊನ್ಸನ್ ಮಾವುಂಕಲ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಕ್ಷಮೆಯಾಚಿಸಿದ್ದಾರೆ.
ಸುಳ್ಳು ಸುದ್ದಿ ನೀಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಕೇಂದ್ರ ಸರ್ಕಾರ ಚಾನೆಲ್‍ಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ರಿಪೋರ್ಟರ್ ವಾಹಿನಿ ಕ್ಷಮೆಯಾಚಿಸಿದೆ. ಕೇಂದ್ರ ಮಾಹಿತಿ, ವಿತರಣೆ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಿಪೋರ್ಟರ್ ಚಾನೆಲ್ ವಿರುದ್ಧ ಸ್ವೀಕರಿಸಿದ ದೂರುಗಳನ್ನು ಪರಿಶೀಲಿಸಿದಾಗ ಇದು ಕೇಬಲ್ ಟೆಲಿವಿಷನ್ ನೆಟ್‍ವರ್ಕ್ (ನಿಯಂತ್ರಣ) ಕಾಯಿದೆ, 1995 ರ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅದರ ಆಧಾರದ ಮೇಲೆ ಸುಳ್ಳು ಸುದ್ದಿ ನೀಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಕೇಂದ್ರ ಆದೇಶ ಹೊರಡಿಸಿತ್ತು ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ನೀಡಿದ ರಪೋರ್ಟರ್ ವಾಹಿನಿಯ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಕೆ.ಸುಧಾಕರನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ಈ ವಿಷಯ ತಿಳಿಸಿದ್ದಾರೆ. ರ್ರಿಪೋರ್ಟರ್ ವಾಹಿನಿ ಹಾಗೂ ವರದಿಗಾರ ಎಂ.ವಿ.ನಿಕೇಶ್ ಕುಮಾರ್ ವಿರುದ್ಧ ರೂ.1 ಕೋಟಿ ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿದ್ದರು. ಈ ಪ್ರಕರಣವನ್ನು ಮುಂದುವರಿಸುವುದಾಗಿ ಸುಧಾಕರನ್ ಹೇಳಿದ್ದಾರೆ.
ನಕಲಿ ಸುದ್ದಿ; ರಿಪೋರ್ಟರ್ ವಾಹಿನಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದೆ ಎಂದ ಕೇಂದ್ರ ಸಚಿವ
0
ಜುಲೈ 28, 2022