ನಾವು ಮಾಡುವ ಪ್ರತಿಯೊಂದು ಕೆಲಸನೂ ನಮ್ಮ ವ್ಯಕ್ತಿತ್ವವನ್ನ ಪ್ರತಿಬಿಂಬಿಸುತ್ತದೆ. ಅದೇ ರೀತಿ ನಾವು ಮಲಗುವ ಸ್ಥಾನ ಅಥವಾ ಭಂಗಿ ಕೂಡ. ನಾವು ಯಾವ ರೀತಿ ನಿದ್ರಿಸುತ್ತೀವೋ, ಅದರ ಮೇಲೆ ನಾವು ಎಂತಹವರು, ನಮ್ಮ ವ್ಯಕ್ತಿತ್ವ ಎಂತಹುದು ಎಂಬುದನ್ನು ಅರಿಯಬಹುದು.
ಇದಕ್ಕೆ ಪುಷ್ಠಿ ನೀಡುವಂತಹ ಹಲವಾರು ಸಂಶೋಧನೆಗಳೂ ನಡೆದಿವೆ. ಹಾಗಾದರೆ, ಯಾವ ಭಂಗಿಯ ವ್ಯಕ್ತಿ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳ್ಕೋಬೇಕಾ? ಹಾಗಾದ್ರೆ ಈ ಲೇಖನ ನಿಮಗಾಗಿ. ಇಲ್ಲಿ ನೀವು ಮಲಗುವ ಸ್ಥಾನದಿಂದ ನೀವು ಎಂತಹ ವ್ಯಕ್ತಿತ್ವ ಹೊಂದಿರುತ್ತೀರಿ ಎಂಬುದನ್ನು ಹೇಳಲಾಗಿದೆ.
ನಿಮ್ಮ ಮಲಗುವ ಭಂಗಿ ಅಥವಾ ಸ್ಥಾನವು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ನಿಮ್ಮ ಬೆನ್ನಿನ ಮೇಲೆ ಅಥವಾ ಅಂಗಾತ ಮಲಗುವುದು: ನೀವು ನಿಮ್ಮ ಬೆನ್ನಿನ ಮೇಲೆ ಅಥವಾ ಅಂಗಾತ ಮಲಗುತ್ತಿದ್ದರೆ, ನೀವೊಬ್ಬ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರಲು ಬಯಸುವ ವ್ಯಕ್ತಿ ಎಂದರ್ಥ. ಅಂದರೆ, ಎಲ್ಲರೂ ನಿಮ್ಮನ್ನು ಗಮನಿಸುವಂತೆ ಬಯಸುವ ವ್ಯಕ್ತಿ ಎಂದರ್ಥ. ಜೊತೆಗೆ ಸಮಾನ ಮನಸ್ಕ ಜನರ ಸಹವಾಸವನ್ನು ಆನಂದಿಸುವ ಆಶಾವಾದಿ. ಜನರಿಂದ ತುಂಬಿಕೊಂಡಿರುವ ಕೋಣೆಯಲ್ಲಿ ನೀವು ಸಾಮಾನ್ಯವಾಗಿ ಧೈರ್ಯಶಾಲಿ ಆಗಿರುತ್ತೀರಿ. ನೀವು ರಾಜ ಅಥವಾ ರಾಣಿಯಂತಿರುವವರು. ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುವವರು. ನೀವು ಯಾವುದೇ ವ್ಯರ್ಥ ಮಾತುಕತೆಗಳಲ್ಲಿ ತೊಡಗಿಕೊಳ್ಳಲು ಇಷ್ಟಪಡುವುದಿಲ್ಲ. ನಿಮ್ಮ ಗುರಿಗಳನ್ನು ಸಾಧಿಸಲು ಅತ್ಯಂತ ಸೂಕ್ಷ್ಮವಾಗಿ ಮತ್ತು ನಿರಂತರವಾಗಿ ಕೆಲಸ ಮಾಡುತ್ತೀರಿ. ಇದರಿಂದ ಯಶಸ್ವಿ ವ್ಯಕ್ತಿಯಾಗುತ್ತೀರಿ.
ಒಂದು ಬದಿ ಮುಖ ಹಾಕಿ ಮಲಗುವುದು ನೀವು ಒಂದು ಬದಿ ಮುಖ ಹಾಕಿ ಮಲಗುವವರಾಗಿದ್ದರೆ, ನೀವೊಬ್ಬ ಶಾಂತ, ವಿಶ್ವಾಸಾರ್ಹ, ಸಕ್ರಿಯ, ಸಾಮಾಜಿಕ ಜೀವನ ಇಷ್ಟಪಡುವ ವ್ಯಕ್ತಿ ಎಂದರ್ಥ. ಯಾವಾಗಲೂ ಮುಂದೆನಾಗುತ್ತೆ ಎನ್ನುವುದನ್ನ ಯೋಚಿಸುತ್ತೀರಿ ಹೊರತು, ಈ ಹಿಂದೆ ಆಗಿ ಹೋಗಿದ್ದಕ್ಕೆ ವಿಷಾದ ಪಡುತ್ತಾ ಕೂರಲಾರರು. ಅಷ್ಟೇ ಅಲ್ಲ, ಭವಿಷ್ಯದ ಬಗ್ಗೆ ಇವರಿಗೆ ಭಯವಿರುವುದಿಲ್ಲ. ಯಾವುದೇ ಬದಲಾವಣೆಗಳು ಅಥವಾ ಪರಿಸ್ಥಿತಿಗೂ ಸುಲಭವಾಗಿ ಹೊಂದಿಕೊಳ್ಳುತ್ತೀರಿ. ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕುವಂತವರು. ನಿಮ್ಮ ಬಗ್ಗೆ, ಒಳ್ಳೆಯ ಮತ್ತು ಕೆಟ್ಟ ಅಂಶಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ನಿಮ್ಮನ್ನು ಮೋಸ ಮಾಡುವುದು ಸುಲಭವಲ್ಲ. ಕಷ್ಟದ ಸಮಯದಲ್ಲಿಯೂ ನಿಮ್ಮ ಮುಖದಲ್ಲಿ ಸದಾ ನಗು ಮೂಡುತ್ತಿರುತ್ತದೆ.
ಭ್ರೂಣದ ರೀತಿ ಮಲಗುವುದು ನೀವು ಭ್ರೂಣದ ಸ್ಥಿತಿಯಲ್ಲಿ ನಿದ್ರಿಸುತ್ತಿದ್ದರೆ, ನೀವು ರಕ್ಷಣೆಯನ್ನು ಬಯಸುತ್ತೀದ್ದೀರಿ ಎನ್ನುವುದನ್ನು ಸೂಚಿಸುತ್ತದೆ. ಇದರ್ಥ ನಿಮ್ಮನ್ನು ಇತರರು ಅರ್ಥ ಮಾಡಿಕೊಳ್ಳಲು ಹಂಬಲಿಸುತ್ತೀರಿ ಜೊತೆಗೆ ತಮ್ಮನ್ನು ಯಾರಾದರೂ ಕಾಳಜಿ ಮಾಡಬೇಕೆಂದು ಬಯಸುವವರಾಗಿರುತ್ತೀರಿ. ಭ್ರೂಣದ ಭಂಗಿಯಲ್ಲಿ ಸುರುಳಿಯಾಕಾರವಾಗಿ ಮಲಗುವುದು ಪ್ರಾಪಂಚಿಕ ಸಮಸ್ಯೆಗಳಿಂದ ಸಂಪರ್ಕ ಕಡಿತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಇಂತಹವರು ಯಾರೊಂದಿಗೂ ಹೆಚ್ಚಾಗಿ ಸೇರುವುದಿಲ್ಲ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಹೊರಗೆ ನೋಡಲು ಕಠಿಣವಾಗಿ ಕಂಡರೂ, ಇವರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಇವರು ಹೆಚ್ಚಾಗಿ ಚಿತ್ರಕಲೆ, ಚಬರವಣಿಗೆ, ನೃತ್ಯ ಇತ್ಯಾದಿಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.
ಹೊಟ್ಟೆಯ ಮೇಲೆ ಮಲಗುವುದು ನೀವು ನಿಮ್ಮ ಹೊಟ್ಟೆಯ ಮೇಲೆ ಮಲಗುವವರಾಗಿದ್ದರೆ, ನೀವೊಬ್ಬ ಬಲವಾದ ಇಚ್ಛಾಶಕ್ತಿಯುಳ್ಳ, ಅಪಾಯವನ್ನು ತೆಗೆದುಕೊಳ್ಳುವ, ಸಾಹಸಿ, ಉನ್ನತ ಮನೋಭಾವದ, ಸಮಸ್ಯೆ-ಪರಿಹರಿಸುವ ವ್ಯಕ್ತಿಯೆಂದು ಹೇಳುತ್ತದೆ. ಇತರರಿಗೆ ಮಾರ್ಗದರ್ಶನ ನೀಡುವಲ್ಲಿ ನೀವು ಪರಿಣಾಮಕಾರಿಯಾಗಿರುತ್ತೀರಿ. ರೀಚಾರ್ಜ್ ಆಗಿರಲು ದಿನಕ್ಕೆ 8 ಗಂಟೆಗಳ ಕಾಲ ಮಲಗಲು ಹೆಚ್ಚು ಬಯಸುತ್ತೀರಿ. ಒಮ್ಮೊಮ್ಮೆ ಒರಟಾಗಿ ವರ್ತಿಸುವ ವ್ಯಕ್ತಿಯಾಗಿದ್ದೀರಿ. ನಿಮಗೆ ಟೀಕೆಗಳೆಂದರೆ ಇಷ್ಟವಾಗುವುದಿಲ್ಲ. ಅದನ್ನು ಸುಲಭವಾಗಿ ಸ್ವೀಕಾರ ಮಾಡುವವರಲ್ಲ ಇವರು. ಆದ್ರೆ ಸ್ನೇಹಿತರು ಇವರ ಸಂಪರ್ಕವನ್ನು ಸದಾ ಬಯಸುತ್ತಾರೆ, ಏಕೆಂದರೆ ಎಲ್ಲಾ ಸನ್ನಿವೇಶಕ್ಕೂ ಈ ವ್ಯಕ್ತಿಗಳು ಸಿದ್ಧರಾಗಿರುತ್ತಾರೆ.