ಕಾಸರಗೋಡು: ಮುನ್ನಾಡ್ ನಿವಾಸಿ, ಸಿಪಿಎಂನ ಹಿರಿಯ ಮುಖಂಡ, ಉದುಮ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪಿ.ರಾಘವನ್(85)ಮಂಗಳವಾರ ನಿಧನರಾದರು. 1991ರಿಂದ 1996ರ ವರೆಗೆ ಉದುಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು ಬೇಡಡ್ಕ ¥ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಿಪಿಎಂ ಕಾಸರಗೋಡು ಜಿಲ್ಲಾ ಕನ್ವೀನರ್ ಆಗಿದ್ದರು. ಹಿರಿಯ ಸಹಕಾರಿಯಾಗಿದ್ದ ಇವರು, ಮುನ್ನಾಡ್‍ನಲ್ಲಿ ಸಹಕಾರಿ ವಿದ್ಯಾಸಂಸ್ಥೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಿ.ರಾಘವನ್ ಅವರ ಮೃತದೇಹವನ್ನು ಮುನ್ನಾಡ್ ಪೀಪಲ್ಸ್ ಕಾಲೇಜು ವಠಾರದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸದ ಬಳಿಕ ಅಂತಿಮ ಸಂಸ್ಕಾರ ನಡೆಸಲಾಯಿತು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.