ಕಾಸರಗೋಡು: ಕೇರಳದ ಏಕೈಕ ಭಗವದ್ಪಾದ ಶಾಂಕರ ಪರಂಪರೆಯ ಮಠವೆಂಬ ಹೆಗ್ಗಳಿಕೆಯ, ಪ್ರಾಚೀನ ಮಠವಾದ ಎಡನೀರು ಶ್ರೀಮಠದ ಯತಿಗಳಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯ ವ್ರತಾನುಷ್ಠಾನ ಬುಧವಾರದಿಂದ ಆರಂಭಗೊಳ್ಳಲಿದೆ. ಸೆಪ್ಟಂಬರ್ 10ರ ವರೆಗೆ ಆಚರಣೆ ನಡೆಯಲಿದೆ.
ದ್ವಿತೀಯ ಚಾತುರ್ಮಾಸ್ಯವನ್ನೂ ಶ್ರೀಮಠದಲ್ಲೇ ನಡೆಸಿರುವ ಈ ಸಂದರ್ಭ ಅಂದು ಮಧ್ಯಾಹ್ನ 2 ಕ್ಕೆ ಎಡನೀರು ಮಠದ ಆವರಣದಲ್ಲಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ತೊಡಗಲಿದೆ. ಈ ಸಂದರ್ಭ ಸಂಸದ ರಾಜಮೋಹನ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವ ಸಮಾರಂಭವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹಷೇಂದ್ರ ಕುಮಾರ್ ಉದ್ಘಾಟಿಸುವರು. ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಮಾಜಿ ಶಾಸಕ ಕುಂಞÂ ರಾಮನ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಕೃಷ್ಣಲೀಲೆ-ಕಣ್ಣಪರ್ವ-ಗಧಾಪರ್ವ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.