ಬದಿಯಡ್ಕ: ಎಡನೀರು 35 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಮಂತ್ರಣ ಪತ್ರಿಕೆ ಎಡನೀರು ಶ್ರೀ ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಆಶೀರ್ವದಗಳೊಂದಿಗೆ ನಿನ್ನೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಮಠದ ಆಡಳಿತ ಅಧಿಕಾರಿಗಳಾದ ರಾಜೇಂದ್ರ ಕಲ್ಲೂರಾಯ, ಗಣೇಶೋತ್ಸವ ಸಮಿತಿಯ ಅದ್ಯಕ್ಷ ವೇಣುಗೋಪಾಲ ಮಾಸ್ತರ್, ಉತ್ಸವ ಸಮಿತಿ ಅಧ್ಯಕ್ಷ ರಮೇಶ ಕಳೇರಿ, ಪ್ರಧಾನ ಕಾರ್ಯದರ್ಶಿ ಧನರಾಜ್ ಎಡನೀರು, ಮಾಧವ ಹೇರಳ ಮಾಸ್ತರ್, ಭವಾನಿ ಶಂಕರ ಮಾಸ್ತರ್, ಪ್ರಭಾ ಕಲ್ಲೂರಾಯ, ಈಶ್ವರ ಭಟ್ ಕಿಳಿಂಗಾರು, ಅಶೋಕ್ ಚಾಪಾಡಿ, ಸೋಮಶೇಖರ ಚಾಪಾಡಿ, ಗೋಪಾಲ ಕೆಮ್ಮಂಗಯ, ಸತೀಶ್ ಕೆಮ್ಮಂಗಯ, ಕಿರಣ್ ಎಡನೀರು ಮುಂತಾದವರು ಉಪಸ್ಥಿತರಿದ್ದರು.