ಕುಂಬಳೆ: ರಾಮಕ್ಷತ್ರಿಯ ಯುವ ಸಂಘ ಉಡುಪಿ ಭಜನಾ ಮಾಧುರ್ಯ 100ನೇ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಅಂತರ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲಕ್ಷಣಾನಂದ ಸರಸ ್ವತಿ ಮಹಿಳಾ ಭಕ್ತ ವೃಂದ ಅಣಂಗೂರು ಕಾಸರಗೋಡು ಇವರನ್ನು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಅಂತರ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕಾಸರಗೋಡಿನಿಂದ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದ ಭಜನಾ ಸಂಘವು, ಕಾಸರಗೋಡು ಕನ್ನಡದ ಮಣ್ಣು, ಕನ್ನಡ ಸಂಸ್ಕøತಿಯ ನೆಲ, ನೆಲೆ ಎಂಬುದು ಸಾಬೀತುಪಡಿಸಿದೆ. ಸ್ಪರ್ಧೆಗಳು ಅದರಲ್ಲೂ ವಿಜೇತರಾಗುವುದು, ಪ್ರಥಮ ಸ್ಥಾನ ಗಿಟ್ಟಿಸುವುದು ಆತ್ಮಸ್ಥೈರ್ಯ ಮೂಡಿಸುತ್ತದೆ. ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಕವಾಗುತ್ತದೆ ಎಂದು ಈ ಸಂದರ್ಭ ಗಣ್ಯರು ತಿಳಿಸಿದರು.
ಧಾರ್ಮಿಕ ಮುಂದಾಳು, ಸಮಾಜ ಸೇವಕ ಕೆ. ಎನ್. ವೆಂಕಟ ್ರಮಣ ಹೊಳ್ಳ ಅಭಿನಂದಿಸಿದರು. ರಾಮರಾಜ ಯಾನೆ ಕೋಟೆಯಾರ್ ಸೇವಾ ಸಮಿತಿ ಜಿಲ್ಲಾ ಸಂಘದ ಅಧ್ಯಕ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷೆ ವಹಿಸಿದ್ದರು. ಭಜನಾ ಗುರು "ಸಂಕೀರ್ತನಾ ಸಾಮ್ರಾಟ್' ಬಿರುದಾಂಕಿತ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಅಣಂಗೂರು ಉಪ ಸಂಘದ ಅಧ್ಯಕ್ಷ ಕೆ. ಕಮಲಾಕ್ಷ ಅಣಂಗೂರು, ಜಿಲ್ಲಾ ಸಂಘ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕೋಶಾಧಿಕಾರಿ ಸತೀಶ್ ಕೆ. ಮಾಸ್ತರ್, ನಗರದ ಬಿ.ಇ.ಎಂ. ಪ್ರೌಢಶಾಲಾ ಪ್ರಾಂಶುಪಾಲ ರಾಜೇಶ್ಚಂದ್ರ ಮಾಸ್ತರ್, ಮಾಜಿ ಕೌನ್ಸಿಲರ್ ರಾಧಾಕೃಷ್ಣ ಅಣಂಗೂರು ಪತ್ರಕರ್ತ ಜಗನ್ನಾಥ್, ಜಗದೀಶ್ ಕೂಡ್ಲು, ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಉಷಾ ನವೀನ್ ಚಂದ್ರ, ಪ್ರಥಮ ಸ್ಥಾನ ಪಡೆದ ಸಂಘವನ್ನು ಶ್ಲಾಘಿಸಿದರು.
ಭಜನಾ ಸಂಘದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ ಅಣಂಗೂರ್, ಅಧ್ಯಕ್ಷೆ ಬಬಿತಾ, ಕನ್ನಡ ಭವನದ ಸಂಧ್ಯಾರಾಣಿ ಟೀಚರ್ ಉಪಸ್ಥಿತರಿದ್ದರು.
ರಾಜ್ಯ "ಭಜನಾ ಮಾಧುರ್ಯ" ಪ್ರಥಮ ಸ್ಥಾನ ವಿಜೇತರಾದ ಲಕ್ಷಣಾನಂದ ಸರಸ್ವತಿ ಮಹಿಳಾ ಭಕ್ತ ವೃಂದವನ್ನು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲ ಇದರ ಸ್ಥಾಪಕಾಧ್ಯಕ್ಷ ಕೆ. ವಾಮನ ರಾವ್ ಬೇಕಲ್, ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ಸ್ಮರಣಿಕೆ, ಪುಷ್ಪ ಗುಚ್ಛ ಹಾಗೂ ಪುರಂದರ ದಾಸರ ಹಾಡಿನ ಪುಸ್ತಕ ನೀಡಿ ಅಭಿನಂದಿಸಿ ಗೌರವಿಸಿದರು. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಭವನ ಪ ್ರಧಾನ ಕಾರ್ಯದರ್ಶಿ ಜಗದೀಶ್ ಕೂಡ್ಲು ನಿರ್ವಹಿಸಿದರು. ಕಾರ್ಯದರ್ಶಿ ನವೀನ್ ಚಂದ್ರ ಅಣಂಗೂರ್ ಸ್ವಾಗತಿಸಿ, ಕನ್ನಡ ಭವನ ಪದಾಧಿಕಾರಿ ವಸಂತ ಕೆರೆಮನೆ ವಂದಿಸಿದರು.