ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದು ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ತಗ್ಗು ಪ್ರದೇಶ ಜಲಾವೃತಗೊಳ್ಳಲಾರಂಭಿಸಿದೆ. ಜಿಲ್ಲೆಯ ಪೈವಳಿಕೆ ಪಂಚಾಯಿತಿ ಕುಡಾಳು ಮೇರ್ಕಳ ಪ್ರದೇಶದಸುಮಾರು 150ಎಕರೆಯಷ್ಟು ಬಯಲು ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಬಯಲಿನಲ್ಲಿ ಸಂಚಾರಕ್ಕೂ ತಡೆಯುಂಟಾಗಿದೆ. ಇದರಿಂದ ಕುಡಾಲು, ಸುಬ್ಬಯ್ಯಕಟ್ಟೆ, ಚೇವರು ಪ್ರದೇಶದ ಜನತೆ ಸಮಸ್ಯೆ ಎದುರಿಸುವಂತಾಗಿದೆ.
ಬಿರುಸಿನ ಮಳೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸೇರಿದಂತೆ ವಿವಿಧ ಕಾಮಗಾರಿಗಳಿಗೂ ತಡೆಯುಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡಿನಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೂ ಸಮಸ್ಯೆಯುಂಟಾಗಿದೆ. ಸಮುದ್ರ ಕೊರೆತ ಹೆಚ್ಚಾಗಿದ್ದು, ಜಿಲ್ಲೆಯ ನಾನಾ ಕಡೆ ಕರಾವಳಿ ಪ್ರದೇಶದ ಜನತೆ ಆತಂಕದಲ್ಲಿ ಕಾಳ ಕಳೆಯುವಂತಾಗಿದೆ.