ಮೊಬೈಲ್ ಗ್ರಾಹಕರೇ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ. ನಿಮ್ಮ ಮೊಬೈಲ್ ನಿಂದ ವೈಯಕ್ತಿಕ ಸಂಗತಿಗಳನ್ನು ಕದ್ದು ಬ್ಲಾಕ್ ಮೇಲ್ ಮಾಡುವ ಹೊಸ ಆ್ಯಪ್‌ವೊಂದು ಅತ್ಯಂತ ವೇಗವಾಗಿ ಹರಡುತ್ತಿದೆ. ಹೌದು, ನಿಮ್ಮ ಮೊಬೈಲ್ ಆ್ಯಂಡ್ರೈಡ್ ಫೋನ್ ಆಗಿದ್ದರೆ, ನೀವು ತುಂಬಾನೇ ಸುಲಭವಾಗಿ ನಿಗೂಢ ಸ್ಪೈವೇರ್ ಗೆ ಬಲಿಪಶುವಾಗಬಹುದು.
ಫೋನ್ ಸ್ಪೈ (PhoneSpy) ಎಂಬ ಬೇಹುಗಾರಿಕೆ ಆ್ಯಪ್ ಬಗ್ಗೆ ತಂತ್ರಜ್ಞರು, ಮೊಬೈಲ್ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.
ತಂತ್ರಜ್ಞರ ಸಂಶೋಧನೆ ಪ್ರಕಾರ ಈ ಡೇಂಜರ್ ಆ್ಯಪ್, ಇತರೆ 20 ಆ್ಯಪ್ ನೊಂದಿಗೆ ಸೇರ್ಪಡೆಗೊಂಡು, ನಿಮ್ಮ ಮೊಬೈಲ್ ಗೆ ಇನ್ ಸ್ಟಾಲ್ ಆಗಿರುವ ಸಾಧ್ಯತೆ ಇದೆ. ಅಂದರೆ ನಿಮ್ಗೆ ಗೊತ್ತಾಗದ ರೀತಿಯಲ್ಲಿ ಆ್ಯಂಡ್ರಾಯ್ಡ್ ಮೊಬೈಲ್'ನ ಬ್ಯಾಕ್ ಗ್ರೌಂಡ್'ನಲ್ಲಿ ತನ್ನ ನಿಗೂಢ ಕಾರ್ಯ ನಿರ್ವಹಿಸುತ್ತಿರಬಹುದು ಅಂತಾ ತಂತ್ರಜ್ಞರು ಹೇಳಿದ್ದಾರೆ.
ಫೋನ್ ಸ್ಪೈನ ಮೊದಲ ಕೆಲಸ, ನಿಮ್ಮ ಮೊಬೈಲ್ ನಲ್ಲಿರುವ ಸೆಕ್ಯೂರಿಟಿ ಆ್ಯಪ್ ಗಳನ್ನು ಅನ್ ಇನ್ ಸ್ಟಾಲ್ ಮಾಡುತ್ತದೆ. ಗೂಗಲ್ ಸ್ಟೋರ್ ನಲ್ಲಿರುವ ಆ್ಯಪ್ ಗಳಂತೆ ಇದು ಗುಣಲಕ್ಷಣ ಹೊಂದಿರುತ್ತದೆ. ಆದರೆ, ಝಿಂಪೆರಿಯಮ್ ಸಂಶೋಧಕರ ಪ್ರಕಾರ, ಸಾಮಾನ್ಯ ಆ್ಯಪ್ ನಂತೆ ನಟಿಸುವ ಈ ಅಪ್ಲಿಕೇಷನ್, ಇತರೆ 23 ಅಪ್ಲಿಕೇಷನ್ ನಲ್ಲಿ ಅಡಗಿ ಕುಳಿತಿರುವುದನ್ನು ಸಂಶೋಧನೆ ಮಾಡಿದ್ದಾರೆ.
PhoneSpy ಆ್ಯಪ್ ಫೋನ್‌ನ ಕ್ಯಾಮೆರಾವನ್ನು ನಿಮ್ಗೆ ಗೊತ್ತಿಲ್ಲದೆ ಪ್ರವೇಶಿಸಬಹುದು ಮತ್ತು ಬಳಕೆದಾರರಿಗೆ ತಿಳಿಯದೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲೂಬಹುದು. ಅಲ್ಲದೆ, ವಿಡಿಯೋ ರಿಕಾರ್ಡಿಂಗ್ ಮಾಡುವ ಅಧಿಕಾರ ಹೊಂದಿದೆ. ಈ ಫೋಟೋ ಹಾಗೂ ವಿಡಿಯೋಗಳು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಅಲ್ಲದೆ, ವೈಯಕ್ತಿಕ ಅಥವಾ ಕಾರ್ಪೊರೇಟ್ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಾಗುವ ಎಲ್ಲ ರೀತಿಯ ಕಾರ್ಯವನ್ನು ನಿರ್ವಹಿಸುವ ಶಕ್ತಿಯನ್ನು ಈ ಆ್ಯಪ್ ಹೊಂದಿದೆ ಅಂತಾ ತಂತ್ರಜ್ಞರು ಹೇಳಿದ್ದಾರೆ.
ಫೋನ್ ಸ್ಪೈನಿಂದ ಹೇಗೆ ಪಾರಾಗುವುದು?:
ಫೋನ್ ಸ್ಪೈ ಸಂಪರ್ಕ ಹೊಂದಿರುವ ಆ್ಯಪ್ ಅನ್ನು ಡೌನ್ ಲೋಡ್ ಮಾಡಿದಾಗ ಕೆಲವು ಸಂಗತಿಗಳ ಮೂಲಕ ಕಂಡುಹಿಡಿಯಬಹುದು. ಈ ಅಪ್ಲಿಕೇಷನ್ ಗಳನ್ನು ಇನ್ ಸ್ಟಾಲ್ ಮಾಡುವಾಗ ಅತಿಯಾದ ಆನ್ ಡಿವೈಸ್ (On Device)ಅನುಮತಿ ಕೇಳುತ್ತದೆ. ಈ ಸಂದರ್ಭದಲ್ಲಿ ಬಳಕೆದಾರರು ಅಲರ್ಟ್ ಆಗಬೇಕಾಗುತ್ತದೆ. ಈ ವೇಳೆ ಎಲ್ಲ ರೀತಿಯ ಪ್ರಶ್ನೆಗಳಿಗೆ ಅನುಮತಿ ಕೊಡಬಾರದು. ಒಂದು ವೇಳೆ ಕೊಡುತ್ತಾ ಹೋದಂತೆ ನಿಮ್ಮ ಫೋನ್ ಸಂಪೂರ್ಣವಾಗಿ ಬೇಹುಗಾರಿಕೆ ಆ್ಯಪ್ ನ ಅಧಿನಕ್ಕೆ ಒಳಪಡುತ್ತದೆ. ಅಲ್ಲದೆ, ಮೆನು (MENU)ನಲ್ಲಿ ಇದು ಗೋಚರಿಸುವುದಿಲ್ಲ. ಬ್ಯಾಕ್ ಗ್ರೌಂಡ್ ನಲ್ಲಿ (ಆ್ಯಪ್ ಒಳಗಡೆ ಸೇರಿಕೊಂಡು) ಕಾರ್ಯನಿರ್ವಹಿಸುವುದರಿಂದ ನೀವು ಮೊಬೈಲ್ ಮೇಲಿನ ಸಂಪೂರ್ಣ ಹಿಡಿತವನ್ನು ಕಳೆದುಕೊಳ್ಳುತ್ತೀರಿ. ಈ ಆ್ಯಪ್ ಇನ್ ಸ್ಟಾಲ್ ( (Instal) ಆದ್ಮೇಲೆ ಫೋಟೋ, ವಿಡಿಯೋ, ಡೇಟಾ ಕಳ್ಳತನವಾಗುವುದನ್ನು ತಡೆಯಲು ನಿಮ್ಮಿಂದ ಸಾಧ್ಯವಾಗುವುದಿಲ್ಲ ಅಂತಾ ಝಿಂಪೆರೀಯಮ್ ನ ರಿಚರ್ಡ್ ಮೆಲಿಕ್ ಟೆಕ್ ಕ್ರಂಚ್ ಗೆ ತಿಳಿಸಿದ್ದಾರೆ.
ಸಾವಿರಕ್ಕೂ ಹೆಚ್ಚು ಮೊಬೈಲ್ ನಲ್ಲಿ ಪತ್ತೆ:
PhoneSpy ಸದ್ಯಕ್ಕೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಇದು ಮುಕ್ತ ಮಾರುಕಟ್ಟೆ ಮತ್ತು ಸಾಮಾಜಿಕ ಆಧಾರಿತ (Web Traffing)ಮೂಲಕ ಹರಡುತ್ತಿದೆ ಅಂತಾ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಮ್ಗೆ ಗೊತ್ತಾಗದೆ ಇರೋ ರೀತಿಯಲ್ಲಿ ಇದು ಇನ್ ಸ್ಟಾಲ್ ಆಗುವುದರಿಂದ ನಮ್ಮ ಮೊಬೈಲ್ ನಿಯಂತ್ರಣ ಬೇರೆಯವರ ಕೈಗೆ ಸೇರುತ್ತದೆ. ಈ ರೀತಿಯಾಗಿ ದಕ್ಷಿಣ ಕೊರಿಯಾದ ಸಾವಿರಕ್ಕೂ ಹೆಚ್ಚು ಮೊಬೈಲ್ ಗಳಲ್ಲಿ ಈ ಅಪ್ಲಿಕೇಷನ್ ಸೇರಿಕೊಂಡಿರುವ ಬಗ್ಗೆ ಮಾಹಿತಿ ಹೊರಬಂದಿದೆ.
ಅಮೆರಿಕ ಜತೆ ಮಾಹಿತಿ ಹಂಚಿಕೊಂಡ ದ.ಕೊರಿಯಾ:
ಕಾನೂನುಬದ್ಧ ಅಪ್ಲಿಕೇಷನ್ ಗಳಂತೆ ಮುಖವಾಡ ಧರಿಸುವ ಈ ಆ್ಯಪ್ ಅನ್ನು ಟ್ರ್ಯಾಕ್ ಮಾಡುವುದು ಅತ್ಯಂತ ಕಷ್ಟ, ಈ ಗೂಢಚಾರಿ ಆ್ಯಪ್ ಬಗ್ಗೆ ಅಮೆರಿಕ ತಂತ್ರಜ್ಞರೊಂದಿಗೆ ಮಾಹಿತಿ ಹಂಚಿಕೊಂಡಿರುವುದಾಗಿ ದಕ್ಷಿಣ ಕೊರಿಯಾ ಹೇಳಿಕೊಂಡಿದೆ. ಸ್ಪೈವೇರ್ ತುಂಬಾನೇ ಆ್ಯಕ್ಟಿವ್ ಆಗಿದ್ದು, ಅಷ್ಟೇ ವೇಗವಾಗಿ ಹರಡುತ್ತಿದೆ. ಆದ್ದರಿಂದ, ಮೊಬೈಲ್ ಗ್ರಾಹಕರು ಸಮಸ್ಯೆಗಳಿಗೆ ಸಿಲುಕೋಕು ಮುನ್ನ ಅನುಮಾನಾಸ್ಪದ ಅಪ್ಲಿಕೇಷನ್‌ಗಳಿಂದ ದೂರವಿರುವುದು ಒಳ್ಳೆಯದು.