ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆಯ ಪ್ರಶಂಸನೆ ಪಾತ್ರವಾಗಿದ್ದು, ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
. ಬಾಲಿವುಡ್ (Bollywood) ನಟ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಇದರ ನಡುವೆ ಅವರ ಮನೆಗೆ ಇಂದು ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ವಿಶೇಷ ಪತ್ರವೊಂದು ಕಳುಹಿಸಿದ್ದಾರೆ. ಹಿಂದಿ ಚಲನಚಿತ್ರೋದ್ಯಮದಿಂದ ಅತಿ ಹೆಚ್ಚು ತೆರಿಗೆ ಪಾವತಿಸುವವರಲ್ಲಿ ನಟ ಅಕ್ಷಯ್ ಕುಮಾರ್ ಸಹ ಒಬ್ಬರು ಎಂದು ಗೌರವಯುತವಾಗಿ ಆದಾಯ ತೆರಿಗೆ ಇಲಾಖೆ ಬಾಲಿವುಡ್ ಕಿಲಾಡಿಗೆ ಸಮ್ಮಾನ್ ಪತ್ರವನ್ನು ನೀಡಿದೆ.
ಈ ಮೂಲಕ ಅಕ್ಷಯ್ ಕುಮಾರ್ ಮತ್ತೊಮ್ಮೆ ಎಲ್ಲರಿಗೂ ಮಾದರಿಯಾಗಿದ್ದು, ಹೆಚ್ಚು ತೆರಿಗೆ (Income Tax) ಪಾವತಿಸುವವರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಅಕ್ಷಯ್‌ಗೆ ನೀಡಿರುವ ಸಮ್ಮಾನ್ ಪ್ರತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಾರಿ 29.5 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸದ್ಯ ಅಕ್ಷಯ್ ಕುಮಾರ್ ಟಿನು ದೇಸಾಯಿ ಅವರ ಮುಂಬರುವ ಚಿತ್ರದ ಶೂಟಿಂಗ್ಗಾಗಿ ಯುಕೆ ಅಲ್ಲಿ ಇದ್ದಾರೆ. ಹೀಗಾಗಿ ಸಮ್ಮಾನ್ ಪತ್ರವನ್ನು ಅವರ ತಂಡ ಸ್ವೀಕರಿಸಿದೆ ಎಂದು ಹೇಳಲಾಗಿದೆ.
ಕಳೆದ 5 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರ ಪೈಕಿ ನಿರಂತರವಾಗಿ ನಟ ಅಕ್ಷಯ್‌ಗೆ ಈ ಗೌರವವನ್ನು ನೀಡಿರುವುದು ಇದೇ ಮೊದಲ ನಿದರ್ಶನವಲ್ಲ. ಈ ಹಿಂದೆಯೂ ಅಕ್ಷಯ್ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದರು.