HEALTH TIPS

ಅಮರಾವತಿ ಕೆಮಿಸ್ಟ್ ಹತ್ಯೆ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಿದ ಗೃಹ ಸಚಿವಾಲಯ

            ಮುಂಬೈ: ಬಿಜೆಪಿಯ ಅಮಾನತುಗೊಂಡ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದ ಟೇಲರ್ ಕನ್ಹಯ ಲಾಲ್ ಅವರನ್ನು ರಾಜಸ್ಥಾನದ ಉದಯಪುರದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಗೆ ಒಂದು ವಾರ ಮೊದಲು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಪಶುಔಷಧಿ ವ್ಯಾಪಾರಿಯೊಬ್ಬರ ಕೊಲೆ ಪ್ರಕರಣದ ತನಿಖೆ ನಡೆಸುವಂತೆ ಕೇಂದ್ರ ಗೃಹಸಚಿವ ಅಮಿತ್ಶಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಸೂಚಿಸಿದ್ದಾರೆ.

              ಕೊಲ್ಹೆ ಹತ್ಯೆ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಪೊಲೀಸ್ ಇಲಾಖೆ ಭಯೋತ್ಪಾದನಾ ನಿಗ್ರಹ ದಳ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತಂಡಗಳು, ಪ್ರಕರಣದ ತನಿಖೆಗಾಗಿ ಅಮರಾವತಿಯೆಡೆಗೆ ಧಾವಿಸಿವೆಯೆಂದು ಮೂಲಗಳು ತಿಳಿಸಿವೆ.
               ಉಮೇಶ್ ಕೊಲ್ಹೆ ಹತ್ಯೆ ನಡೆದ ಎರಡು ವಾರಕ್ಕೂ ಹೆಚ್ಚು ಸಮಯದ ಬಳಿಕ ಪೊಲೀಸರು ಎರಡೂ ಪ್ರಕರಣಗಳಿಗೆ ನಂಟಿರುವುದನ್ನು ದೃಢಪಡಿಸಿದ್ದಾರೆ ಹಾಗೂ ಅಮರಾವತಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ಚಿತ್ರಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
                  ಪ್ರಕರಣಕ್ಕೆ ಸಂಬಂಧಿಸಿ ಈತನಕ ಆರು ಮಂದಿಯನ್ನು ಬಂಧಿಸಲಾಗಿದೆ.

              ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಔಷಧಿ ವ್ಯಾಪಾರಿ ಉಮೇಶ್ ಕೊಲ್ಹೆಯನ್ನು ಹತ್ಯೆಗೈದಿರುವುದಾಗಿ ಆರೋಪಿಗಳು ಹೇಳಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ವಿಕ್ರಮ್ ಸಾಲಿ ತಿಲಿಸಿದ್ದಾರೆ.
                   54 ವರ್ಷದ ಔಷಧಿ ವ್ಯಾಪಾರಿ ಉಮೇಶ್ ಕೊಲ್ಹೆ ಅವರ ಹತ್ಯೆಯು ಉದಯಪುರದಲ್ಲಿ ಒಂದು ವಾರದ ಬಳಿಕ ನಡೆದ ಕೊಲೆ ಪ್ರಕರಣದ ಜೊತೆ ನಂಟು ಹೊಂದಿದೆಯೆಂದು ಅಮರಾವತಿಯ ಸ್ಥಳೀಯ ಬಿಜೆಪಿ ಘಟಕವು ಆರೋಪಿಸಿದೆ.
               ಅಮರಾವತಿ ಜಿಲ್ಲಾ ಬಿಜೆಪಿ ನಾಯಕಿ ತುಷಾರ್ ಭಾರತೀಯ ಅವರು ಶನಿವಾರ ಹೇಳಿಕೆಯೊಂದನ್ನು ನೀಡಿ, ಉಮೇಶ್ ಕೊಲ್ಹೆಯ ಹತ್ಯೆಯು ನೂಪುರ್ ಶರ್ಮಾ ವಿವಾದದ ಜೊತೆ ನಂಟು ಹೊಂದಿದೆ. ಪೊಲೀಸರು ಕೂಡಾ ಹಾಗೆಯೇ ಭಾವಿಸಿದ್ದಾರೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಆರೋಪಿಗಳು ಕೊಲ್ಹೆಯನ್ನು ಹತ್ಯೆಗೈದಿದ್ದಾರೆಂಬುದು ನಮಗೆ ತಿಳಿದುಬಂದಿದೆ. ಆದರೆ ಪೊಲೀಸರು ಈ ವಿಷಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ'' ಎಂದು ಅಮರಾವತಿ ಜಿಲ್ಲಾ ಬಿಜೆಪಿ ನಾಯಕ ತುಷಾರ್ ಭಾರತೀಯ ಆರೋಪಿಸಿದ್ದಾರೆ.
             '' ಕೊಲ್ಹೆ ಹತ್ಯೆ ಘಟನೆಯು ಜೂನ್ 21ರಂದು ನಡೆದಿತ್ತು. ಈ ಪ್ರಕರಣವು 22ನೇ ತಾರೀಕಿನಲ್ಲಿ ವ್ಯಾಪಕವಾಗಿ ವರದಿಯಾಗಿದ್ದಲ್ಲಿ ಉದಯಪುರದ ಟೈಲರ್ ಕನ್ಹಯ ಅವರು ಕೊಲೆಯಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಪೊಲೀಸರು ಈ ವಿಷಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಒಂದು ವೇಳೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಆನಂತರವೂ ಕೊಲೆಯ ನೈಜ ಕಾರಣವನ್ನು ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಪ್ರಕರಣವನ್ನು ಪೊಲೀಸರಿಂದ ವರ್ಗಾಯಿಸಬೇಕಾಗಿದೆ'' ಎಂದವರು ತಿಳಿಸಿದರು.
                  ಪಶುಔಷಧಿ ವ್ಯಾಪಾರಿಯಾದ ಉಮೇಶ್ ಕೊಲ್ಹೆ ಅವರು ಜೂನ್ 21ರಂದು ಅಮರಾವತಿ ನಗರದಲ್ಲಿರುವ ತನ್ನ ಅಂಗಡಿಯಿಂದ ರಾತ್ರಿ 10:00 ಗಂಟೆ ವೇಳೆಗೆ ಮನೆಗೆ ಹಿಂತಿರುಗುತ್ತಿದ್ದಾಗ ಮೋಟಾರ್ಸೈಕಲ್ನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿ ಮಾರಾಕಾಯುಧದಿಂದ ಕತ್ತು ಕುಯ್ದು ಹತ್ಯೆಗೈದಿದ್ದರು.

              ಅವರ 27 ವರ್ಷ ವಯಸ್ಸಿನ ಪುತ್ರ ಹಾಗೂ ಪತ್ನಿ ಅವರು ಇನ್ನೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದರು.
                ಪ್ರವಾದಿ ಮುಹಮ್ಮದ್ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್ ಒಂದನ್ನು ಉಮೇಶ್ ಕೊಲ್ಹೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಎಂದು ಅಮರಾವತಿ ಜಿಲ್ಲಾ ಬಿಜೆಪಿ ಘಟಕ ತಿಳಿಸಿದೆ.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries