ಮಲಪ್ಪುರಂ: ಕೋತಿಯೊಂದು ಉತ್ತರ ಪತ್ರಿಕೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹಿನ್ನೆಲೆಯಲ್ಲಿ ತನಗೆ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗದೆ ಇದ್ದ ಪರೀಕ್ಷೆಯ ಮರು ಮಾದರಿಯನ್ನು ನೀಡುವಂತೆ ವಿದ್ಯಾರ್ಥಿನಿಯೊಬ್ಬರು ಒತ್ತಾಯಿಸಿದ್ದಾರೆ. ಎಟೆಯೂರು ಮಾವಂಡಿಯೂರು ಬ್ರದರ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಶಿಫ್ಲಾ ಕೆ.ಟಿ ಎಂಬುವರು ವಿಚಿತ್ರ ಮನವಿಗೆ ಮುಂದಾಗಿದ್ದಾರೆ.
ಕಳೆದ ತಿಂಗಳು 24ರಂದು ನಡೆಸಿದ್ದ ಪ್ಲಸ್ ಒನ್ ಸಸ್ಯಶಾಸ್ತ್ರ ಪರೀಕ್ಷೆಯನ್ನು ಮರು ಬರೆಯಲು ಅವಕಾಶ ನೀಡುವಂತೆ ವಿದ್ಯಾರ್ಥಿನಿ ಕೇಳಿದ್ದಾಳೆ. ಈ ಬಗ್ಗೆ ವಿದ್ಯಾರ್ಥಿನಿ ಹೈಯರ್ ಸೆಕೆಂಡರಿ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಕಾಡಿನ ಸಮೀಪ ಇರುವ ಈ ಶಾಲೆಗೆ ಮಂಗಗಳ ಕಾಟ ಹೆಚ್ಚಾಗಿ ಕಂಡು ಬರುತ್ತಿದೆ. ಪರೀಕ್ಷೆ ಬರೆಯುವಾಗ ಪರೀಕ್ಷಾ ಹಾಲ್ ಮೇಲಿದ್ದ ಕೋತಿ ಮೂತ್ರ ವಿಸರ್ಜನೆ ಮಾಡಿದ್ದು, ಇದರೊಂದಿಗೆ ಶಿಫ್ಲಾ ಅವರ ಉತ್ತರ ಪತ್ರಿಕೆ ಹಾಗೂ ಹಾಲ್ ಟಿಕೆಟ್ ಒದ್ದೆಯಾಯಿತು. ಒಂದು ಗಂಟೆ ಅವಧಿಯ ಪರೀಕ್ಷೆಯಲ್ಲಿ ಬರೆಯ ತೊಡಗಿ 15 ನಿಮಿಷಗಳಲ್ಲಿ ಈ ಘಟನೆ ನಡೆಯಿತು. ಆಗ ತರಗತಿಯಲ್ಲಿದ್ದ ಶಿಕ್ಷಕರಿಗೆ ಹೇಳಿದಾಗ ಬೇರೆ ಬರೆಯಲು ಉತ್ತರ ಪತ್ರಿಕೆಗಳಿಲ್ಲ ಎಂದಿದ್ದರು.
ಮತ್ತೆ ಉತ್ತರ ಪತ್ರಿಕೆ ಬರೆಯಲು ಹೇಳಿದರು. ಪ್ರಾಂಶುಪಾಲರಿಗೆ ಸೂಚನೆ ನೀಡಿದ ನಂತರ, ಬಹಳ ಸಮಯದ ನಂತರ ಎರಡನೇ ಪ್ರಶ್ನೆ ಪತ್ರಿಕೆ ಸಿಕ್ಕಿತು. ಇಷ್ಟು ಕಷ್ಟಪಟ್ಟು ಅರ್ಧ ಗಂಟೆ ಕಳೆದು ಹೋದರೂ ಹೆಚ್ಚಿನ ಸಮಯ ಸಿಗಲಿಲ್ಲ. ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇಳಿದಾಗ ಎಸ್ ಇ ಪರೀಕ್ಷೆ ಹಾಗೂ ಸುಧಾರಣಾ ಪರೀಕ್ಷೆ ಇದೆ ಎಂಬ ಉತ್ತರ ಮುಖ್ಯ ಶಿಕ್ಷಕರಿಂದ ಬಂದಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.