ಪತ್ತನಂತಿಟ್ಟ: ಕರ್ಕಾಟಕ ಮಾಸದ ಪೂಜೆಗಾಗಿ ಶಬರಿಮಲೆ ಶ್ರೀಧರ್ಮ ಶಾಸ್ತಾ ಸನ್ನಿಧಿಯ ಗರ್ಭಗೃಹದ ಆಗಿಲು ನಿನ್ನೆ ಸಂಜೆ ತೆರೆಯಲಾಯಿತು. ತಂತ್ರಿ ಕಂಟಾರರ್ ಮಹೇಶ್ ಮೋಹನ್ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಎನ್. ಪರಮೇಶ್ವರ್ ನಂಬೂದಿರಿ ಗರ್ಭಗೃಹದ ಬಾಗಿಲು ತೆರೆದು ದೀಪ ಬೆಳಗಿಸಿದರು. ಮೇಲ್ಶಾಂತಿ ಹದಿನೆಂಟನೇ ಮೆಟ್ಟಿಲಿನ ಎದುರಿನ ಹೋಮಕುಂಡಕ್ಕೆ ಅಗ್ನಿಸ್ಪರ್ಶ ನಡೆಸಿದರು. ನಂತರ ಅಯ್ಯಪ್ಪ ಭಕ್ತರು ಹದಿನೆಂಟು ಮೆಟ್ಟಿಲು ಹತ್ತಿ ದರ್ಶನ ಪಡೆದರು.
ಭಾನುವಾರದಿಂದ ಜು. 21 ರವರೆಗೆ ದರ್ಶನಕ್ಕೆ ಅವಕಾಶವಿದೆ. ಅಯ್ಯಪ್ಪ ಭಕ್ತರು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಬುಕ್ಕಿಂಗ್ ಮಾಡಿ ಭೇಟಿ ನೀಡಬಹುದು. ನಿಲಯ್ಕಲ್ ಗೆ ಆಗಮಿಸುವ ಅಯ್ಯಪ್ಪ ಭಕ್ತರಿಗಾಗಿ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗಿದೆ. ಇಂದು ಬೆಳಗ್ಗೆ ಐದು ಗಂಟೆಗೆ ತೆರೆಯಲಾಗಿದೆ.
ಗರ್ಭಗೃಹದ ಬಾಗಿಲು ತೆರೆದ ಬಳಿಕ ಐದು ದಿನಗಳ ಕಾಲವೂ ನಿತ್ಯ ಅಭಿಷೇಕ, ತುಪ್ಪಾಭಿಷೇಕ, ಗಣಪತಿ ಹೋಮ ಮತ್ತಿತರ ಪೂಜೆಗಳು ನಡೆದವು. ದೇವಾಲಯ ತೆರೆದಿರುವ ಐದು ದಿನವೂ ಉದಯಾಸ್ತಮಯ ಪೂಜೆ, ಅಷ್ಟಾಭಿಷೇಕ, ಕಲಶಾಭಿಷೇಕ, ಕಳಭಾಭಿಷೇಕ, ಪಡಿಪೂಜೆ, ಪುಷ್ಪಾüಷೇಕ ನಡೆಯಲಿದೆ.