ಅಷ್ಟೇ ಅಲ್ಲದೇ ಇಂಥ ಪಾರ್ಟಿಗಳಿಗೆ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ, ಸ್ನೇಹಿತರ ಪತ್ನಿಯರು ಇವರಿಗೆ, ಇವರ ಪತ್ನಿ (ನನ್ನನ್ನು) ಅವರಿಗೆ ನೀಡುವ ಪ್ರಕ್ರಿಯೆ ಅಲ್ಲಿ ನಡೆಯುತ್ತದೆ…
- ಹೀಗೆಂದು ಉತ್ತರ ಪ್ರದೇಶದ ಮುಜಾಫರ್ ಉದ್ಯಮಿಯೊಬ್ಬನ ಪತ್ನಿ 30 ವರ್ಷದಾಕೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಯರ ಎಕ್ಸ್ಚೇಂಜ್ಗೆ ಬಲವಂತ ಮಾಡುತ್ತಿದ್ದ ಉದ್ಯಮಿ ಹಾಗೂ ಆತನ ಸಹೋದರನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಗುರುಗ್ರಾಮ ನಿವಾಸಿಯಾಗಿರುವ ಉದ್ಯಮಿ ಜತೆಗೆ, ಮುಜಾಫರ್ ನಗರದ ಮಹಿಳೆಯ ಮದುವೆ 2021ರ ಜೂನ್ನಲ್ಲಿ ನಡೆದಿದೆ. ಇದು ಮಹಿಳೆಗೆ 2ನೇ ಮದುವೆ. ವಿವಾಹದ ಬಳಿ ಇಬ್ಬರೂ ಗುರುಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಮದುವೆಯಾದ ದಿನದಿಂದಲೇ ಪತಿಯ ಕಿರುಕುಳ ಶುರುವಾಗಿದೆ ಎನ್ನುವುದು ಮಹಿಳೆಯ ಆರೋಪ.
ಕಳೆದ ಏಪ್ರಿಲ್ 24 ರಂದು ನಾನು ಗುರುಗ್ರಾಮ ಪೊಲೀಸ್ ಠಾಣೆಗೆ ತಲುಪಲು ಪ್ರಯತ್ನಿಸಿದೆ. ಆದರೆ ನನ್ನ ಗಂಡನ ಗೂಂಡಾಗಳು ನನ್ನನ್ನು ದಾರಿಯಲ್ಲಿ ಅಡ್ಡಗಟ್ಟಿದರು. ಇದನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಮಹಿಳೆ ದೂರಿದ್ದಾರೆ.
ಈ ಕುರಿತು ಮಾತನಾಡಿರುವ ನ್ಯೂ-ಮಂಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಸೈನಿ, ನಾವು ಮಹಿಳೆಯ ಪತಿ ಮತ್ತು ಅವರ ಸಹೋದರನ ವಿರುದ್ಧ ಸೆಕ್ಷನ್ 376 (ಅತ್ಯಾಚಾರ), 307 (ಕೊಲೆ ಯತ್ನ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸಿದ್ದಕ್ಕಾಗಿ ಶಿಕ್ಷೆ), 504 (ಉದ್ದೇಶಪೂರ್ವಕವಾಗಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.
ಅಂದಹಾಗೆ, ಕೆಲವು ದೇಶಗಳಲ್ಲಿ ಚಾಲ್ತಿಯಲ್ಲಿ ಇರುವ ಈ ಪತ್ನಿಯರ ಎಕ್ಸ್ಚೇಂಜ್ (ವೈಫ್ ಸ್ವೈಪಿಂಗ್) ಭಾರತಕ್ಕೂ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ. ಕೆಲ ಶ್ರೀಮಂತರ ಮನೆತನಗಳಲ್ಲಿ ಇಂಥ ಎಕ್ಸ್ಚೇಂಜ್ ಪಾರ್ಟಿಗಳು ಮಾಮೂಲು. ಬೇರೆಯವರ ಜತೆ ಮಲಗಲು ತಯಾರು ಇರುವ ಮಹಿಳೆಯರು ತಮ್ಮ ಪತಿಯ ಜತೆಗೆ ಇಂಥ ಪಾರ್ಟಿಗೆ ಬರುತ್ತಾರೆ. ಅಲ್ಲಿಯೇ ಆ ರಾತ್ರಿ ಪತ್ನಿಯರು ಅದಲು ಬದಲಾಗುತ್ತಾರೆ!