ಕಾಸರಗೋಡು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆ ಮುಂದಿರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.
ಉತ್ಸವ ಭತ್ತೆಯಾಗಿ ಒಂದು ತಿಂಗಳ ಪಿಂಚಣಿ ವಿತರಿಸಬೇಕು. ಪಿಂಚಣಿ ಪರಿಷ್ಕರಣೆಯ ಬಾಕಿ ಮೊತ್ತವನ್ನು ಒಂದೇ ಬಾರಿ ವಿತರಿಸಬೇಕು, 70 ವರ್ಷ ತುಂಬಿದ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಬಿಡುಗಡೆ ಮಾಡಬೇಕು, ವೈದ್ಯಕೀಯ ಭತ್ಯೆ ಸಕಾಲದಲ್ಲಿ ಹೆಚ್ಚಳಮಾಡಬೇಕು, ಇತರೆ ಪಿಂಚಣಿದಾರರಿಗೆ ನೀಡಿರುವಂತೆ ಎಕ್ಸ್ ಗ್ರೇಷಿಯಾ ಪಿಂಚಣಿದಾರರಿಗೆ ಎಲ್ಲಾ ಸವಲತ್ತು ಒದಗಿಸಿಕೊಡಬೇಕು ಮುಂತಾದ ಬೇಡಿಕೆ ಮುಂದಿಟ್ಟುಕೊಂಡು ಕಲೆಕ್ಟರೇಟ್‍ನಲ್ಲಿ ಮೆರವಣಿಗೆ ಮತ್ತು ಧರಣಿ ನಡೆಸಿತು.
ಸಂಘಟನೆ ರಾಜ್ಯ ಸಮಿತಿ ಸದಸ್ಯ ಪಿ. ಕೆ. ಮಾಧವನ್ ನಾಯರ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಪ್ರಭಾಕರ ಉಡುವಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಪಿ. ಸಿ. ಪ್ರಸನ್ನ, ಜಿಲ್ಲಾ ಕೋಶಾಧಿಕಾರಿ ಕೆ. ಗೋಪಾಲ ಕೃಷ್ಣನ್ ಉಪಸ್ಥಿತರಿದ್ದರು. ವಿ. ಎ. ಜೋಸೆಫ್, ಬಿ. ಸುಬ್ರಹ್ಮಣ್ಯ ತಂತ್ರಿ, ಎ. ನಾರಾಯಣ ಮಾಸ್ಟರ್ ನೇತೃತ್ವ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪಿ. ಕುಂಜಂಬು ನಾಯರ್ ಸ್ವಾಗತಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ. ಸುಜಾತನ್ ವಂದಿಸಿದರು.
ರಾಜ್ಯ ಸೇವಾ ಪಿಂಚಣಿದಾರರ ಸಂಘ ಜಿಲ್ಲಾ ಸಮಿತಿಯಿಂದ ಧರಣಿ
0
ಜುಲೈ 31, 2022