ಮುಳ್ಳೇರಿಯ: ಚಲನಚಿತ್ರಗಳಾಗಲಿ ಕಿರು ಚಿತ್ರಗಳಾಗಲಿ ಸಮಾಜದ ಸ್ವಾಸ್ತ್ಯವನ್ನು ಕಾಪಾಡುವ ಗುರುತರ ಹೊಣೆಯನ್ನು ಹೊಂದಿದೆ ಸಾಮಾಜಿಕ ಕಳಕಳಿ ನೈತಿಕ ಮೌಲ್ಯಗಳೊಂದಿಗೆ ಉತ್ತಮ ಸಂದೇಶವನ್ನು ಸಾರುವ ಮೂಲಕ ಸಮಾಜದ ಧನಾತ್ಮಕ ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಿ ಚಲನಚಿತ್ರಗಳು ಮತ್ತು ಕಿರುಚಿತ್ರಗಳು ಮೂಡಿಬರಬೇಕು. ಹಾಗಾದಾಗ ಅದರ ಮೌಲ್ಯ ವರ್ದಿಸುತ್ತದೆ ನೋಡುಗರು ಅದನ್ನು ಮೆಚ್ಚಿ ಹಾಡಿ ಹೊಗಳಿ ಪೆÇ್ರೀತ್ಸಾಹಿಸುತ್ತಾರೆ ಈ ರೀತಿಯ ವಿಭಿನ್ನ ಕಥಾ ಹಂದರವನ್ನೊಳಗೊಂಡ ಕಿರುಚಿತ್ರವೊಂದು ನವ್ಯತ ಪೆÇ್ರಡಕ್ಷನ್ ನ ಬ್ಯಾನರ್ ನ ಅಡಿಯಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಎಡನೀರು ಮಠ ಇವರ ಶುಭ ಆಶೀರ್ವಾದಗಳೊಂದಿಗೆ ಮಲೆಯಾಳದ ಚಲನಚಿತ್ರ ರಂಗದ ಯುವ ನಿರ್ದೇಶಕ ಕೃಷ್ಣಕುಮಾರ್ ಇವರ ಸಮರ್ಥ ನಿರ್ದೇಶನದಲ್ಲಿ ಪರ್ಯಾಪ್ತ ಎನ್ನುವ ಶೀರ್ಷಿಕೆಯೊಂದಿಗೆ ನಿರ್ಮಾಣಗೊಂಡಿದ್ದು ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಬಿಡುಗಡೆಗೊಳಿಸುವರು.
ನಾಟಕ ರಚನಕಾರ ನಟ ನಿರ್ದೇಶಕ ಕಲಾರತ್ನ ಮಧುಸೂದನ ಬಲ್ಲಾಳ್ ಎ ಬಿ ಇವರು ಕಥೆ ಮತ್ತು ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದು ಅಖಿಲೇಶ್ ನಗುಮುಗಂ ಅವರ ಪೆÇೀಕ್ಸ್ ಸ್ಟಾರ್ ತಂಡವು ಚಿತ್ರಿಕರಣ ನಡೆಸಿದೆ. ಹರ್ಷ ಮಾಸ್ತರ್ ಇವರು ಸಾಹಿತ್ಯ ಬರೆದು ಶಿವಾನಂದ ಉಪ್ಪಳ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಗುರು ಬಾಯರ್ ಹಿನ್ನಲೆ ಸಂಗೀತ ನೀಡಿದ್ದಾರೆ. ಇತಿಹಾಸ ಪ್ರಸಿದ್ಧ ಕುಳದಪಾರೆ ತರವಾಡು ಮತ್ತು ಬೆಳ್ಳೂರಿನ ಆಸುಪಾಸಿನಲ್ಲಿ ಹಸಿರುಡುಗೆಯುಟ್ಟ ಭೂತಾಯಿಯ ಮಡಿಲಲ್ಲಿ ಪ್ರಕೃತಿ ರಮಣೀಯ ಪ್ರದೇಶಗಳ ನೈಜತೆಯ ನೆರಳಿನಲ್ಲಿ ಸುಂದರವಾಗಿ ಚಿತ್ರ ಮೂಡಿಬಂದಿದೆ.
ಈ ಕಿರು ಚಿತ್ರದಲ್ಲಿ ರಾಷ್ಟ್ರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪುರಸ್ಕ್ರತರಾದ ಹಿರಿಯ ಕಲಾವಿದ ಚನಿಯಪ್ಪ ನಾಯ್ಕ್, ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿ ಪುರಸ್ಕøತರು ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ, ಹಿರಿಯ ಸಿನಿಮಾ ನಾಟಕರಂಗ ಕಲಾವಿದೆ ಭಾರತಿ ಬಾಬು ಕಾಸರಗೋಡು, ಹಾಗು ಬೆಳ್ಳೂರಿನ ಯುವ ನಟರ ದಂಡೇ ಇದ್ದು ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ನಟಿಸಿ ಚಿತ್ರದ ಗೆಲುವಿಗೆ ಪೂರ್ಣ ಪ್ರಮಾಣದ ಕೊಡುಗೆಯನ್ನು ನೀಡಿದ್ದಾರೆ. ನಶಿಸಿ ಹೋಗುತ್ತಿರುವ ಜನಪದ ಪ್ರಕಾರಗಳನ್ನು ಉಳಿಸಿ ಬೆಳೆಸುವ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆಯನ್ನು ಸಾರುವುದರೊಂದಿಗೆ ವರ್ತಮಾನದ ಮಹಾ ಪಿಡುಗು ಹನಿಟ್ರ್ಯಾಪ್ ಮತ್ತು ಗೆಳೆತನದ ಮಹತ್ವ ಹಾಗು ಪ್ರಕೃತಿ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಸಾರುವುದು ಈ ಚಿತ್ರಕ್ಕೆ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಸಂಪೂರ್ಣ ಸಹಕಾರದೊಂದಿಗೆ ಜಾನಪದ ಕಲೆಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ನೃತ್ಯ ಸನ್ನಿವೇಶಗಳು ಇದರಲ್ಲಿ ಅಡಕವಾಗಿದೆ.