ಕಾಸರಗೋಡು: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ರಾಜ್ಯಾದ್ಯಂತ ವನಮಹೋತ್ಸವವನ್ನು ಆಚರಿಸುತ್ತಿದೆ. ಕಾಸರಗೋಡಿನ ಸಾಮಾಜಿಕ ಅರಣ್ಯ ವಿಭಾಗವು ಜಿ ಎಚ್ ಎಸ್ ಎಸ್ ನೇತೃತ್ವದಲ್ಲಿ ವನಮಹೋತ್ಸವದ ಸಮಾರೋಪವನ್ನು ಆಯೋಜಿಸಿತ್ತು. ಪೆರಿಯಾದಲ್ಲಿ ನಡೆದ ಸಮಾರೋಪವನ್ನು ಸಾಮಾಜಿಕ ಅರಣ್ಯ ವಿಭಾಗದ ಉತ್ತರ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೀರ್ತಿ ಉದ್ಘಾಟಿಸಿದರು.
ಪುಲ್ಲೂರು-ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ಡ್ ಸದಸ್ಯ ಟಿ.ರಾಮಕೃಷ್ಣನ್ ನಾಯರ್, ಕಾಸರಗೋಡು ಫ್ಲೈಯಿಂಗ್ ಸ್ಕ್ವಾಡ್ ರೇಂಜ್ ಫಾರೆಸ್ಟ್ ಆಫೀಸರ್ ವಿ.ರತೀಶನ್, ಪಿ.ಟಿ.ಎ. ಅಧ್ಯಕ್ಷ ಕೆ.ಬಾಲಕೃಷ್ಣನ್, ಉಪಾಧ್ಯಕ್ಷ ಮಣಿಕಂಠನ್, ಎಸ್.ಎಂ.ಸಿ. ಅಧ್ಯಕ್ಷ ಅಬ್ದುಲ್ ಲತೀಫ್, ಮಾತೃಸಂಘದ ಅಧ್ಯಕ್ಷೆ ಕೆ.ರಾಧಾ, ಕೆ.ವಿ.ವಿನು (ಎಸ್.ಪಿ.ಸಿ. ಪೆರಿಯ), ಎಸ್.ಎಸ್.ಸೆಬಾಸ್ಟಿಯನ್ (ಫಾರೆಸ್ಟ್ರಿ ಕ್ಲಬ್), ಟಿ.ಪ್ರಭಾಕರನ್ ಹಾಗೂ ವಲಯ ಅರಣ್ಯಾಧಿಕಾರಿ ಭಾಗವಹಿಸಿದ್ದರು.