ಮಧೂರು: ಪಟ್ಲ ಶ್ರೀ ಭಗವತಿ ಸೇವಾ ಸಂಘದ ಮಹಾಸಭೆ ಪಟ್ಲ ಶ್ರೀ ಭÀವತಿ ದೈವಸ್ಥಾನ ಪರಿಸರದಲ್ಲಿ ಜರಗಿತು. ಸಂಘದ ಅಧ್ಯಕ್ಷ ರಾಘವ ಕಡಂಬಳ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ ವರದಿ ಲೆಕ್ಕಪತ್ರ ಮಂಡಿಸಿ ಸಭೆಯ ಅಂಗೀಕಾರ ಪಡೆಯಲಾಯಿತು. 2022-23ನೇ ಆರ್ಥಿಕ ವರ್ಷದ ನೂತನ ಅಧ್ಯಕ್ಷರಾಗಿ ಪ್ರಭಾಕರ ಉಳಿಯ, ಉಪಾಧ್ಯಕ್ಷರುಗಳಾಗಿ ರಾಮಕೃಷ್ಣ ನೀರ್ಚಾಲು, ಚಂದ್ರಗೋಪಾಲ ಮಧೂರು, ಪ್ರಧಾನ ಕಾರ್ಯದರ್ಶಿಯಾಗಿ ಸುಕುಮಾರ ಕುದ್ರೆಪ್ಪಾಡಿ, ಕಾರ್ಯದರ್ಶಿಯಾಗಿ ಪ್ರಭಾಕರ ಬೇಳ, ಸತೀಶ್ ಏರಿಕ್ಕಳ, ಕೋಶಾಧಿಕಾರಿಯಾಗಿ ಸುರೇಶ್ ಪಾಲತಡ್ಕ ಹಾಗೂ ಕಾರ್ಯಕಾರೀ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನಾರಾಯಣ ಕಾರ್ನವರ್, ಭಾಸ್ಕರ ಬೆಳ್ಚಪ್ಪಾಡ, ಶಂಕರ ಬೆಳ್ಚಪಾಡ, ಶ್ರೀಕುಮಾರ, ರಾಘವ ಕಡಂಬಳ, ಪ್ರಭಾಕರ ಚೇನೆಕೋಡು, ಶ್ರೀಧರ ಏರಿಕ್ಕಳ, ಉಮೇಶ ಏರಿಕ್ಕಳ, ಪ್ರಭಾಕರ ಉಳಿಯ, ರಾಮಕೃಷ್ಣ ನೀರ್ಚಾಲು, ಚಂದ್ರ ಗೋಪಾಲ ಮಧೂರು, ಪ್ರಭಾಕರ ಬೇಳ, ಸತೀಶ್ ಏರಿಕ್ಕಳ, ಸುರೇಶ್ ಪಾಲತ್ತಡ್ಕ , ದಾಮೋದರ ವಿಷ್ಣುಮೂರ್ತಿನಗರ, ಮಧು ಏರಿಕ್ಕಳ, ಮಾಧವ ಚೇನೆಕ್ಕೋಡು, ಗೋಪಾಲ ಚೇನೆಕ್ಕೋಡು, ಜಯಪ್ರಕಾಶ್ ಬೇಳ, ಗಂಗಾಧರ ಮಧೂರು ಮೊದಲಾದವರು ಶುಭಾಶಂಸನೆಗೈದರು. ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಂದ್ರ ಗೋಪಾಲ ವಂದಿಸಿದರು.