ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಗಮಕ ಶ್ರಾವಣ ಕಾರ್ಯಕ್ರಮ ಜು. 26ರಂದು ಶ್ರೀ ಮಠದಲ್ಲಿ ನಡೆಯಲಿದೆ. ಕರ್ನಾಟಕ ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕ, ಕಾಸರಗೋಡು ಸಿರಿಗನ್ನಡ ವೇದಿಕೆ ಗಡಿನಾಡ ಘಟಕ ವತಿಯಿಂದ ಕಾರ್ಯಕ್ರಮ ಜರುಗಲಿದೆ. ಗಮಕ ಶ್ರಾವಣ ಕಾರ್ಯಕ್ರಮ ಎಡನೀರು ಕ್ಷೇತ್ರದಲ್ಲಿ ಉದ್ಘಾಟನೆಗೊಂಡು ಜಿಲ್ಲೆಯ ವಿವಿಧೆಡೆ ನಡೆಯಲಿದೆ. ಸಂಜೆ 5.45ಕ್ಕೆ ನಡೆಯುವ ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಾರಾಯಣ ಜಿ. ಹೆಗ್ಡೆ ಸಂಸ್ಕøತ ಹಾಗೂ ಡಾ. ಸತೀಶ್ ಪುಣಿಂಚಿತ್ತಾಯ ಪೆರ್ಲ ಕನ್ನಡದಲ್ಲಿ ವಾಚನ ನಡೆಸುವರು. ಡಾ. ಸರವು ಸದಾಶಿವ ಭಟ್ ಮತ್ತು ಡಾ ಶ್ರೀಶ ಕುಮಾರ್ ಪಂಜಿತ್ತಡ್ಕ ವ್ಯಾಖ್ಯಾನ ನಡೆಸುವರು.
ಎಡನೀರು ಮಠದಲ್ಲಿ ಇಂದು ಗಮಕ ಶ್ರಾವಣ ಕಾರ್ಯಕ್ರಮದ ಉದ್ಘಾಟನೆ
0
ಜುಲೈ 26, 2022
Tags