ಕೊಚ್ಚಿ: ತೃಕ್ಕಾಕರ ಉಪಚುನಾವಣೆ ಬಳಿಕ ಡಾ.ಜೋ ಜೋಸೆಫ್ ಕೇರಳೀಯರಿಗೆ ಚಿರಪರಿಚಿತ. ತೃಕ್ಕಾಕರ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ಡಾ.ಜೋ ಜೋಸೆಫ್ ಅವರ ಫೇಸ್ ಬುಕ್ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ವμರ್Áನುಗಟ್ಟಲೆ ಅವರ ಆರೈಕೆಯಲ್ಲಿದ್ದ ರೋಗಿ ಐಸಿಯುನಲ್ಲಿ ಕ್ರಾಂತಿಕಾರಿ ಸೆಲ್ಯೂಟ್ ಹೊಡೆದಿದ್ದಾರೆ ಎಂದು ವೈದ್ಯರ ಪೋಸ್ಟ್ ಹೇಳುತ್ತದೆ.
ಆಂಜಿಯೋಪ್ಲಾಸ್ಟಿಗೆ ಒಳಗಾಗಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ಕಂಡಾಗ ಮುಷ್ಟಿ ಹಿಡಿದು ಸ್ವಾಗತಿಸಿದರು ಎನ್ನುತ್ತಾರೆ ಡಾ.ಜೋ ಜೋಸೆಫ್. ರೋಗಿಯು ಆಗಾಗ್ಗೆ ಅಸ್ವಸ್ಥತೆಯಿಂದ ತೊಂದರೆಗೊಳಗಾಗುತ್ತಿದ್ದರು. ಆದರೆ ತಾನು ಒಮ್ಮೆಯೂ ಅವರÀನ್ನು ನಿರಾಶೆ ಅಥವಾ ದುಃಖಗೊಳಿಸಲು ಸಿದ್ದನಿರಲಿಲ್ಲ. ತೀವ್ರ ಉಸಿರುಗಟ್ಟುವಿಕೆಯಿಂದಾಗಿ ರೋಗಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗವು ಅವರನ್ನು ದುರ್ಬಲಗೊಳಿಸಿದ್ದರಿಂದ ಅವರನ್ನು ವೆಂಟಿಲೇಟರ್‍ಗೆ ಸ್ಥಳಾಂತರಿಸಲಾಯಿತು. ಜೋ ಜೋಸೆಫ್ ಹೇಳುವಂತೆ, ನಾನು ಆಗಾಗ ಐಸಿಯುಗೆ ಹೋಗಿ ರೋಗಿಯನ್ನು ಪರೀಕ್ಷಿಸುತ್ತಿದ್ದೆ ಏಕೆಂದರೆ ಅವರ ದೇಹವು ಪ್ರತಿಕ್ರಿಯಿಸುತ್ತಿಲ್ಲ ಎಂದು ಲಕ್ಷಣಗಳು ಹೇಳುತ್ತಿತ್ತು.
ಇತ್ತೀಚೆಗೆ ಒಂದು ದಿನ ತಾನು ಐಸಿಯುಗೆ ಪ್ರವೇಶಿಸಿ ರೋಗಿಯ ಯೋಗಕ್ಷೇಮವನ್ನು ಪರೀಕ್ಷಿಸಲು ಅವರ ಹೆಸರನ್ನು ಕರೆದೆ ಎಂದು ಡಾ. ಜೋ ಜೋಸೆಫ್ ಹೇಳಿದರು. ಜೋಸೆಫ್ ಅವರು ಡಾಕ್ಟರ್ ಜೋ ಎಂದು ಹೇಳಿದಾಗ ಬಲಗೈಯನ್ನು ಸ್ವಲ್ಪ ಮೇಲಕ್ಕೆತ್ತಿ, ಮುಷ್ಟಿಯನ್ನು ಬಿಗಿದುಕೊಂಡು ನಿಧಾನವಾಗಿ ತುಟಿಗಳನ್ನು ಸರಿಸಿ ‘ಲಾಲ್ ಸಲಾಮ್ ಕಾಮ್ರೇಡ್’ ಎಂದು ಆ ನಿತ್ರಾಣ ರೋಗಿ ಹೇಳಿರುವುದಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ‘ಇನ್ನೂ ಕೆಲವು ದಿನ ಹೋರಾಡಿ ಬಾ ಗೆಳೆಯ’ ಎಂದು ತಾವೂ ಉತ್ತರಿಸಿದೆ ಎಂದು ಅವರು ತಿಳಿಸಿದರು.
'ನಾನು ಕೂಗಿ ಕರೆದ ಇದು ಡಾಕ್ಟರ್ ಜೋ' ಎಂದು; ಮುಷ್ಟಿಯನ್ನು ಬಿಗಿಗೊಳಿಸಿ ‘ಲಾಲ್ ಸಲಾಂ ಕಾಮ್ರೇಡ್’ ಎಂದ ರೋಗಿ: ಐಸಿಯುನಲ್ಲಿದ್ದ ರೋಗಿ ಕ್ರಾಂತಿಕಾರಿ ಶುಭಾಶಯ ಕೋರಿದರು ಎಂದು ಬರೆದ ಡಾ.ಜೋ ಜೋಸೆಫ್
0
ಜುಲೈ 25, 2022