ನವದೆಹಲಿ: ಚಿನ್ನ, ಬೆಳ್ಳಿ ದರದಲ್ಲಿ ಸ್ವಲ್ಪ ಮಟ್ಟದ
ಇಳಿಕೆಯಾಗಿದೆ. 10 ಗ್ರಾಮ್ ಚಿನ್ನದ ಬೆಲೆ 51,145 ರೂಪಾಯಿಗಳಾಗಿದ್ದು, 1 ಕೆ.ಜಿ
ಬೆಳ್ಳಿಯ ದರ 1,331 ರೂಪಾಯಿಯಷ್ಟು ಕಡಿಮೆಯಾಗಿದೆ.
ಹೆಚ್ ಡಿಎಫ್ ಸಿ ಸೆಕ್ಯೂರಿಟೀಸ್ ನ ಈ ಅಂಕಿ-ಅಂಶವನ್ನು ಹಂಚಿಕೊಂಡಿದ್ದು, ನೆನ್ನೆಯವರೆಗೂ ಚಿನ್ನದ ದರ 10 ಗ್ರಾಮ್ ಗಳಿಗೆ 51,150 ರೂಪಾಯಿಗಳಾಗಿತ್ತು.
ಬೆಳ್ಳಿಯ ದರ ಪ್ರತಿ ಕೆ.ಜಿಗೆ 55,682 ರೂಪಾಯಿಗಳಿದ್ದದ್ದು 54,351 ರೂಪಾಯಿಗಳಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಪ್ರತಿ ಔನ್ಸ್ ಗೆ ಅನುಕ್ರಮವಾಗಿ 1,726.80 ಹಾಗೂ 18.62 ಡಾಲರ್ ನಷ್ಟಿದೆ.