HEALTH TIPS

ಜಾಗರೂಕರಾಗಿರಿ, ಯಾರಿಗೆ ನೋವು ತಂದರೂ: ಯಾವಾಗಲೂ ಮಧ್ಯದಲ್ಲಿ ಯಾರಾದರೂ ಕಾಯುತ್ತಿರುತ್ತಾರೆ; ಸೇಡಿಗಾಗಿ!

Top Post Ad

Click to join Samarasasudhi Official Whatsapp Group

Qries

Qries



           ತ್ರಿಶೂರ್; ಬೀದಿ ನಾಯಿಗಳು ರಸ್ತೆ ಬದಿಯಲ್ಲಿ ನಿತ್ಯ ಕಾಣಸಿಗುತ್ತಿವೆ. ನಾಯಿಗಳು ಸಾಮಾನ್ಯವಾಗಿ ಆಕ್ರಮಣಕಾರಿಗಳಲ್ಲ. ಮತ್ತು ಹೆಚ್ಚಿನ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಬೀದಿಯಲ್ಲಿ ಸಿಕ್ಕಿದ್ದನ್ನು ತಿಂದು ಬದುಕುತ್ತವೆ.ತ್ರಿಶೂರ್ ಪೆರುಂಬಿಲಾವ್ ಸೆಂಟರ್‍ನಲ್ಲಿ ನಾಯಿಯೊಂದು ಸ್ಥಳೀಯರ ಕುತೂಹಲದ ದೃಶ್ಯವಾಗಿದೆ.
          ಕಳೆದ ಎರಡು ವರ್ಷಗಳಿಂದ ಅದರ ನಿರಂತರ ದಿನಚರಿ ಜನರು ಅದÀನ್ನು ಗಮನಿಸುವಂತೆ ಮಾಡಿದೆ. ಪ್ರತಿದಿನ ಬೆಳಿಗ್ಗೆ 5:30 ರಿಂದ 6:00 ರ ನಡುವೆ, ಪೆರುಂಬಿಲಾವ್ ಸೆಂಟರ್‍ನಲ್ಲಿರುವ ಮಿಲ್ಮಾ ಬೂತ್‍ಗೆ ಬಂದಾಗ ನಾಯಿ ಬೊಗಳುತ್ತದೆ ಮತ್ತು ಸಣ್ಣ ಕಾರುಗಳನ್ನು ಹಿಂಬಾಲಿಸುತ್ತದೆ.
            ಸ್ವಲ್ಪ ಸಮಯದ ನಂತರ ಆ ಸ್ಥಳವನ್ನು ತೊರೆಯುತ್ತದೆ. ಆದರೆ ಸಂಜೆ ಮತ್ತೆ ಅದೇ ಸಮಯದಲ್ಲಿ ಅಲ್ಲಿಗೆ ಮರಳುತ್ತದೆ.  ಈ ವಿಚಿತ್ರ ಘಟನೆಯ ಹಿಂದಿನ ಕಾರಣವನ್ನು ಹುಡುಕಿದವರಿಗೆ ಇದು ಸೇಡಿನ ಕಥೆ ಎಂದು ತಿಳಿದು ಬರುತ್ತದೆ.
           ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಈ ಬೀದಿ ನಾಯಿಗೆ ಕಾರು ಡಿಕ್ಕಿ ಹೊಡೆದಿತ್ತು. ಅಂದು ಗಂಭೀರವಾಗಿ ಗಾಯಗೊಂಡಿದ್ದ ನಾಯಿಯನ್ನು ಪೆರುಂಬಿಲಾವ್ ನ ವ್ಯಾಪಾರಿಗಳು ಮತ್ತು ಸ್ಥಳೀಯರು ರಕ್ಷಿಸಿ ಆರೈಕೆ ಮಾಡಿದ್ದರು. ಅಂದಿನಿಂದ, ನಾಯಿ ಅಲ್ಲಿ ವಾಸಿಸುತ್ತಿದೆ.
         ಹಗಲು ರಾತ್ರಿ ಹಲವೆಡೆ ನಾಯಿ ತಿರುಗಾಡಿದರೂ ಬೆಳಗ್ಗೆ ಮತ್ತು ಸಂಜೆ ವೇಳೆ ಪೆರುಂಬಿಲಾವ್ ಕೇಂದ್ರ ತಲುಪುತ್ತದೆ. ಎರಡು ವರ್ಷಗಳ ಹಿಂದೆ ಕಡಿಮೆ ಬೆಳಕಿನಲ್ಲಿ ನಾಯಿಗೆ ಕಾರು ಡಿಕ್ಕಿ ಹೊಡೆದಿತ್ತು. ತನಗೆ ಡಿಕ್ಕಿ ಹೊಡೆದ ಕಾರನ್ನು ಹುಡುಕಲು ಪ್ರತಿದಿನ ನಾಯಿ ರಾಜ್ಯ ಹೆದ್ದಾರಿ ಬದಿ ಠಳಾಯಿಸುತ್ತದೆ.
          ಅದು  ಚಿಕ್ಕ ಕಾರುಗಳು ಕಂಡುಬಂದಲ್ಲಿ  ಬೊಗಳುತ್ತದೆ ಮತ್ತು ಆ ಕಾರುಗಳನ್ನು ಒಂದಷ್ಟು ದೂರ ಹಿಂಬಾಲಿಸುತ್ತದೆ.  ಇತರ ವಾಹನಗಳಿಗೆ ಅಥವಾ ಪ್ರಯಾಣಿಕರಿಗೆ ಹಾನಿ ಮಾಡಿದ ಯಾವ ದಾಖಲೆಯೂ ಇಲ್ಲ. ಬೆಳಗ್ಗೆ ಸಂಜೆ ಅರ್ಧ ಗಂಟೆ ಓಡಾಡಿದ ಮೇಲೆ ಎಲ್ಲಿಗೋ ಹೋಗುತ್ತದೆ. ಮರುದಿನ ಮತ್ತೆ ಬರುತ್ತದೆ. ಒಂದು ಕಾಲದಲ್ಲಿ ತನ್ನನ್ನು ಕೊಲ್ಲಲು ಹವಣಿಇಸದ ಕಾರನ್ನು ಹುಡುಕಲು ನಾಯಿ ಕಾದು ನಿಂತಿರುವುದು ಇಂದಿಗೂ ಸ್ಥಳೀಯರ ಕುತೂಹಲದ ದೃಶ್ಯವಾಗಿದೆ.




Below Post Ad


ಜಾಹಿರಾತು














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries