ಲಂಡನ್: ಸದಾ ತಂಪಾದ ವಾತಾವರಣಕ್ಕೆ ಹೆಸರಾದ ಬ್ರಿಟನ್‌ನಲ್ಲಿ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿರುವ ಭಾರಿ ಬಿಸಿಲು ಹಾಗೂ ಬಿಸಿಗಾಳಿ ಆ ದೇಶವನ್ನು ಅಕ್ಷರಶಃ ತಲ್ಲಣಗೊಳಿಸಿವೆ.
ಲಂಡನ್: ಸದಾ ತಂಪಾದ ವಾತಾವರಣಕ್ಕೆ ಹೆಸರಾದ ಬ್ರಿಟನ್‌ನಲ್ಲಿ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿರುವ ಭಾರಿ ಬಿಸಿಲು ಹಾಗೂ ಬಿಸಿಗಾಳಿ ಆ ದೇಶವನ್ನು ಅಕ್ಷರಶಃ ತಲ್ಲಣಗೊಳಿಸಿವೆ.
ಭಾನುವಾರ ಬ್ರಿಟನ್‌ನಲ್ಲಿ ಉಂಟಾದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ಆ ದೇಶದ ಇತಿಹಾಸದಲ್ಲೇ ಅತಿಹೆಚ್ಚಿನ ತಾಪಮಾನವನ್ನು ದಾಖಲಿಸಿದೆ.
ಅಲ್ಲದೇ ಮಂಗಳವಾರ 40 ರಿಂದ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬರಲಿದೆ ಎಂದು ಬ್ರಿಟನ್ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2019 ರಲ್ಲಿ ಕೆಂಬ್ರಿಡ್ಜ್ ಬಾಟಾನಿಕ್ ಗಾರ್ಡನ್‌ನಲ್ಲಿ 37 ರಷ್ಟು ದಾಖಲೆ ಉಷ್ಣಾಂಶ ದಾಖಲಾಗಿತ್ತು. ಈಗ ಕಂಡು ಬರುತ್ತಿರುವ ತಾಪಮಾನ ಬ್ರಿಟನ್ ಪಾಲಿಗೆ ಅತ್ಯಂತ ಕ್ರೂರವಾದದ್ದು. ಇದು ಖಂಡಿತವಾಗಿಯೂ ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮ ಎಂದು ಬ್ರಿಟನ್ ಹವಾಮಾನ ಇಲಾಖೆ ಮುಖ್ಯಸ್ಥ ಪೌಲ್ ಡೇವಿಸ್ ಹೇಳಿದ್ದಾರೆ.
ವೇಲ್ಸ್, ಲಂಡನ್ ಸೇರಿದಂತೆ ಅನೇಕ ನಗರಗಳಲ್ಲಿ ಬಿಸಿಗಾಳಿಯ ಮುನ್ಸೂಚನೆ ನೀಡಲಾಗಿದ್ದು, ಅನೇಕ ಕಡೆಗೆ ಸಾರ್ವಜನಿಕ ಸಾರಿಗೆ ಹಾಗೂ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ.