ಬದಿಯಡ್ಕ: ದೇಶಿಯ ಅಧ್ಯಾಪಕ ಪರಿಷತ್ತು ಕುಂಬಳೆ ಉಪಜಿಲ್ಲಾ ಘಟಕದಿಂದ ಗುರುವಂದನಾ ಕಾರ್ಯಕ್ರಮ ಜರಗಿತು. ಹಿರಿಯ ನಿವೃತ್ತ ಅಧ್ಯಾಪಕ, ಸಂಘಟನೆಯ ಕಾರ್ಯಕರ್ತರಾಗಿದ್ದ ಸೀತಾರಾಮ್ ರಾವ್ ಪಿಲಿಕೂಡ್ಲು ಅವರ ನಿವಾಸದಲ್ಲಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ರಾಜ್ಯ ಕಾರ್ಯದರ್ಶಿ ಪ್ರಭಾಕರನ್ ನಾಯರ್, ಜಿಲ್ಲಾ ಅಧ್ಯಕ್ಷ ರಂಜಿತ್, ಉಪಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಕುಲಾಲ್ ಹಾಗೂ ಜಿಲ್ಲಾ ಸಮಿತಿ ಸದಸ್ಯೆ ಕವಿತಾ ಟೀಚರ್, ರವಿರಾಜ ಅಗಲ್ಪಾಡಿ, ಸದಾಶಿವ ಶರ್ಮ ಕೋಳಾರಿಯಡ್ಕ ಉಪಸ್ಥಿತರಿದ್ದರು.