ಅಬುಧಾಬಿ: ಕಾಸರಗೋಡು ಮೂಲದ ಯುವಕನೊಬ್ಬ ತನ್ನ ವಸತಿ ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಅಬುಧಾಬಿಯಲ್ಲಿ ನಡೆದಿದೆ.
ಪಾಣತ್ತೂರು ಪನತ್ತಡಿ ಮೂಲದ ಕುಣಿಯ ಪಲ್ಲಾರತ್ ನಿವಾಸಿ ನಾಸೀರ್ ಮತ್ತು ಸುಲೈಖಾ ದಂಪತಿಯ ಪುತ್ರ ಮುಹಮ್ಮದ್ ಶಮೀಮ್ (24) ಮೃತರು.
ಭಾನುವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಮೀಮ್ ಅಬುಧಾಬಿ ಸಿಟಿ ಏರ್ ಪೋರ್ಟ್ ಬಳಿ ಇರುವ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿ ತಮ್ಮ ನಿವಾಸಕ್ಕೆ ಆಗಮಿಸಿದಾಗ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಶಮೀಮ್ ಒಂದು ವರ್ಷದ ಹಿಂದೆ ಊರಿಗೆ ಬಂದವರು ಅಬುಧಾಬಿಗೆ ವಾಪಸಾಗಿದ್ದರು. ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ ಸ್ವಂತ ಮನೆ ಕಟ್ಟಲು ಸಿದ್ಧತೆ ನಡೆಸುತ್ತಿರುವಾಗಲೇ ಕುಟುಂಬದ ಏಕೈಕ ಆಶ್ರಯವಾಗಿದ್ದ ಇವರು ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ, ಸಹೋದರಿ: ಫಾತಿಮತ್ ಶಮ್ನಾ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಕೆಎಂಸಿಸಿ ನೇತೃತ್ವದಲ್ಲಿ ಮೃತದೇಹವನ್ನು ಮನೆಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ.
ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಕಾಸರಗೋಡು ಮೂಲದ ವ್ಯಕ್ತಿ ಮೃತ್ಯು
0
ಜುಲೈ 31, 2022